ADVERTISEMENT

ಎರಡು ಹೋರಿ ಇರುವ ವಾಹನ ಜಪ್ತಿ: ಕಸಾಯಿ ಖಾನೆಗೆ ಸಾಗುತ್ತಿದೆ ಎಂಬ ಅನುಮಾನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:44 IST
Last Updated 7 ಜೂನ್ 2025, 14:44 IST
ಹುಲಸೂರ ತಾಲ್ಲೂಕಿನ ಬೇಲೂರು ಗ್ರಾಮದ ಬಜರಂಗದಳದ ಯುವಕರು ಎರಡು ಹೋರಿಗಳನ್ನು ಪೊಲೀಸರಿಗೆ ಒಪ್ಪಿಸಿದರು
ಹುಲಸೂರ ತಾಲ್ಲೂಕಿನ ಬೇಲೂರು ಗ್ರಾಮದ ಬಜರಂಗದಳದ ಯುವಕರು ಎರಡು ಹೋರಿಗಳನ್ನು ಪೊಲೀಸರಿಗೆ ಒಪ್ಪಿಸಿದರು   

ಹುಲಸೂರ: ತಾಲ್ಲೂಕಿನ ಗಡಿಗೌಡಗಾಂವ ಗ್ರಾಮದ ರೈತನಿಗೆ ಸೇರಿದ್ದವು ಎನ್ನಲಾದ ಎರಡು ಹೋರಿಗಳನ್ನು ವಾಹನದಲ್ಲಿ ತುಂಬಿಕೊಂಡು ಬಸವಕಲ್ಯಾಣಕ್ಕೆ ಸಾಗುತ್ತಿದ್ದ ಮಾರ್ಗ ಮಧ್ಯೆ ಬೇಲೂರು ಗ್ರಾಮದಲ್ಲಿ ಯುವಕರು ತಡೆದು ಪರಿಶೀಲನೆ ನಡೆಸಿದ ಬಳಿಕ ಹುಲಸೂರ ಪಶು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಶನಿವಾರ ಜರುಗಿದೆ.

ಜಾನುವಾರು ಸೇರಿದಂತೆ ಸಾಗಾಣಿಕೆಗೆ ಬಳಸಿದ ವಾಹನ ವಶಕ್ಕೆ ತೆಗೆದುಕೊಂಡ ಪಿಎಸ್ಐ ಶಿವಪ್ಪ ಮೇಟಿ, ‘ಈ ಕುರಿತು ತನಿಖೆ ನಡೆಸಿದ ಬಳಿಕ ಸಂಬಂಧಪಟ್ಟ ರೈತರು ದಾಖಲಾತಿ ಸಲ್ಲಿಸಿದಲ್ಲಿ ಮರಳಿ ಒಪ್ಪಿಸಲಾಗುವುದು ಇಲ್ಲದಿದ್ದರೆ, ಗೋ ಶಾಲೆಗೆ ಸಾಗಿಸುವಂತೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಬೇಲೂರು ಗ್ರಾಮದ ಯುವಕರಾದ ಆಕಾಶ ಬಿದ್ಮನೆ, ಪ್ರದೀಪ ಕವಳೆ, ಸಿದ್ದು ಪಾಟೀಲ್, ಮಲ್ಲಿಕಾರ್ಜುನ ಬರಗಲೆ, ರೇವಣಸಿದ್ದ ಬರಗಲೆ, ಶರಣು ತೋಗಲೂರೆ ಹಾಗೂ ಹುಲಸೂರ ಬಜರಂಗದಳ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಮಂಗಾ, ವಿಜಯಸ್ವಾಮಿ, ಬಸವರಾಜ ರಗಟ್ಟೆ, ಅಜಯ ಚಾಕೋತೆ, ಅವಿನಾಶ ಮೇತ್ರೆ, ಪ್ರಜ್ವಲ್ ಸಜ್ಜನ್, ನಾಗೇಶ ಭರಮಶೇಟೆ, ಬಾಬು ವತಾರೆ, ಚನ್ನವೀರಸ್ವಾಮಿ, ಮಲ್ಲಿಕಾರ್ಜುನ ಪಾರಶೇಟೆ ಸೇರಿದಂತೆ ಯುವಕರು ಉಪಸ್ಥಿತರಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.