
ಔರಾದ್: ತಾಲ್ಲೂಕಿನಲ್ಲಿ ಶುಕ್ರವಾರ ಒಂದೇ ದಿನ ಮೂರು ಕಡೆ ತೋಳ ದಾಳಿ ಮಾಡಿ ಬಾಲಕ ಹಾಗೂ ಮೂವರು ಮಹಿಳೆಯರನ್ನು ಗಾಯಗೊಳಿಸಿದೆ.
ತಾಲ್ಲೂಕಿನ ಆಲೂರ್ (ಬಿ) ಗ್ರಾಮದ ರುಕ್ಮಿಣಿಬಾಯಿ ಮೇತ್ರೆ, ಜೀರ್ಗಾ (ಬಿ) ಗ್ರಾಮದ ಮಂಗಲಾ ಸ್ವಾಮಿ, ಬಾಲಕ ರೇವಪ್ಪ ಪ್ರಭು ಹಾಗೂ ಜೋಜನಾ ಗ್ರಾಮದ ಲಲಿತಮ್ಮ ಕಾಂಬಳೆ ತೋಳ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಲದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ದಾಳಿ ಮಾಡಿದ ತೋಳ ಆಲೂರ ಗ್ರಾಮದ ರುಕ್ಮಿಣಿಬಾಯಿ ಅವರ ತಲೆ ಹಾಗೂ ಕಿವಿಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಜೀರ್ಗಾ ಗ್ರಾಮದ ಮಂಗಲಾ ಅವರ ತಲೆಗೆ ಹಾಗೂ ಬಾಲಕ ರೇವಪ್ಪನ ತೊಡೆ, ಕಾಲಿಗೆ ಗಾಯಗೊಳಿಸಿದೆ. ಲಲಿತಮ್ಮ ಕಾಂಬಳೆ ಅವರ ಬೆನ್ನಿಗೆ ಗಾಯಗೊಳಿಸಿದ್ದು, ಇವರೆಲ್ಲರನ್ನು ಸಂತಪೂರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬ್ರಿಮ್ಸ್‌ಗೆ ಸಾಗಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ತೋಳ ದಾಳಿಯಿಂದ ರೈತರಲ್ಲಿ ಆತಂಕ ಆವರಿಸಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತೋಳದ ಹುಡುಕಾಟ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.