ADVERTISEMENT

ವುಶು ಕ್ರೀಡಾಕೂಟ; ಫೈಟಿಂಗ್‌ನಲ್ಲಿ ಕೈ ಮುರಿದುಕೊಂಡ ಬಾಲಕ

ಪದಕ ಪಟ್ಟಿಯಲ್ಲಿ ಬಾಗಲಕೋಟೆ ಮುಂದು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 15:59 IST
Last Updated 29 ಡಿಸೆಂಬರ್ 2023, 15:59 IST
ವುಶು ಕ್ರೀಡಾಕೂಟದಲ್ಲಿ ಗಾಯಗೊಂಡ ಉಡುಪಿ ಜಿಲ್ಲೆಯ ಆಟಗಾರ ಇಮ್ಯಾನುವೆಲ್‌
ವುಶು ಕ್ರೀಡಾಕೂಟದಲ್ಲಿ ಗಾಯಗೊಂಡ ಉಡುಪಿ ಜಿಲ್ಲೆಯ ಆಟಗಾರ ಇಮ್ಯಾನುವೆಲ್‌   

ಬೀದರ್‌: ಕರ್ನಾಟಕ ರಾಜ್ಯ ವುಶು ಸಂಸ್ಥೆಯಿಂದ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಎರಡನೇ ದಿನದ ಸ್ಪರ್ಧೆಗಳು ನಡೆದವು.

ಉಡುಪಿ ಜಿಲ್ಲೆಯ ಇಮ್ಯಾನುವೆಲ್‌ ಅವರು ಸ್ಯಾಂಶೋ (ಫೈಟಿಂಗ್‌) ಸ್ಪರ್ಧೆಯಲ್ಲಿ ಕಿಕ್‌ ಹೊಡೆಯುವಾಗ ಆಯಾತಪ್ಪಿ ಕೆಳಗೆ ಬಿದ್ದದ್ದರಿಂದ ಅವರ ಎಡಗೈ ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಅವರನ್ನು ಅವರ ಊರಿಗೆ ಕರೆದೊಯ್ಯಲಾಯಿತು.

ಇನ್ನು, ಎರಡನೇ ದಿನವೂ ಬಾಗಲಕೋಟೆ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿದರು. ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮೈಸೂರು, ಬೆಂಗಳೂರು ನಂತರದ ಸ್ಥಾನದಲ್ಲಿವೆ. ಮೊದಲ ಸಲ ಭಾಗವಹಿಸಿದ ಬೀದರ್‌ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಪದಕಗಳನ್ನು ಜಯಿಸಿದ್ದಾರೆ.

ADVERTISEMENT

‘ಶನಿವಾರ ಸ್ಯಾಂಶೋ (ಫೈಟಿಂಗ್‌) ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಗುತ್ತದೆ. ತಾವಲೂ (ಆ್ಯಕ್ಷನ್‌) ವಿಭಾಗದ ಸ್ಪರ್ಧೆಯಲ್ಲೂ ಮೂರು ಬಹುಮಾನಗಳನ್ನು ನೀಡಲಾಗುತ್ತದೆ’ ಎಂದು ವುಶು ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ವುಶು ಕ್ರೀಡಾಕೂಟದ ಅಂಗವಾಗಿ ಬೀದರ್‌ನಲ್ಲಿ ಶುಕ್ರವಾರ ನಡೆದ ಸ್ಯಾಂಶೋ ವಿಭಾಗದ ಪಂದ್ಯದಲ್ಲಿ ಎದುರಾಳಿ ಆಟಗಾರನ ಎದೆ ಮೇಲೆ ಬಲವಾದ ಕಿಕ್‌ ಮಾಡಿದ ಕೆಂಪುಡುಗೆ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.