ಬೆಂಗಳೂರು: ದೇಶದಲ್ಲಿಸುಮಾರು 3.50 ಕೋಟಿಬಾಂಗ್ಲಾದೇಶದ ಅಕ್ರಮ ವಲಸಿಗರು ನೆಲೆಸಿದ್ದು, ಅವರು ಭಾರತೀಯರ ಉದ್ಯೋಗ ಕಸಿದುಕೊಂಡಿದ್ದಾರೆ. ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಈ ವಲಸಿಗರ ರಕ್ಷಣೆಗೆ ನಿಂತಿರುವುದು ದುರಂತ ಎಂದು ಬಿಜೆಪಿ ಹೇಳಿದೆ.
ಅತ್ಯಂತ ಕಡಿಮೆ ಕೂಲಿಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಬಾಂಗ್ಲಾ ವಲಸಿಗರನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯರ ಉದ್ಯೋಗಾವಕಾಶ ನಷ್ಟವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.
ಬೆಂಗಳೂರೊಂದರಲ್ಲೇ ಬಾಂಗ್ಲಾದೇಶದಿಂದ ಬಂದ3.50 ಲಕ್ಷ ಅಕ್ರಮ ವಲಸಿಗರು ಇದ್ದಾರೆ. ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಕಳುಹಿಸಿದರೆ, ಭಾರತೀಯರಿಗೆ ಉದ್ಯೋಗ ಸಿಗುತ್ತದೆ. ದೇಶದಲ್ಲಿ ನಿರುದ್ಯೋಗ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳುತ್ತಾರೆ. ಆದರೆ, ದೇಶದಲ್ಲಿ ಅಕ್ರಮವಾಗಿ ನೆಲೆಸಿ, ಭಾರತೀಯರ ಉದ್ಯೋಗ ಕಬಳಿಸುತ್ತಿರುವವರ ಹೊರ ಹಾಕಲು ಇವರು ಮುಂದಾಗುತ್ತಿಲ್ಲ ಎಂದರು.
ಪೌರತ್ವ ಕಾಯ್ದೆ ವಿರುದ್ಧ ವಿವಿಧ ಪಕ್ಷಗಳಲ್ಲಿರುವ ಮುಸ್ಲಿಂ ಮುಖಂಡರು, ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಕಮ್ಯುನಿಸ್ಟ್ ಪಕ್ಷಗಳು, ರಾಜಕೀಯ ಕೃಪಾಪೋಷಿತ ಬುದ್ಧಿಜೀವಿಗಳು ಮುಸ್ಲಿಮರಿಗೆ ತಪ್ಪು ಮಾಹಿತಿ ನೀಡಿ ಬೀದಿಗಿಳಿಯುವಂತೆ ಮಾಡಿವೆ. ಮೌಲ್ವಿಗಳು ಮಸೀದಿಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಜೆಎನ್‌ಯು, ಎಎಂಯು ಮತ್ತು ಜಾಮಿಯಾದಂತಹ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರು ಸರ್ಕಾರ ವಿರೋಧಿ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.