ADVERTISEMENT

ಸುವರ್ಣಭೂಮಿ ಯೋಜನೆ: ಫಲಾನುಭವಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 7:35 IST
Last Updated 31 ಜುಲೈ 2012, 7:35 IST
ಸುವರ್ಣಭೂಮಿ ಯೋಜನೆ: ಫಲಾನುಭವಿಗಳ ಆಯ್ಕೆ
ಸುವರ್ಣಭೂಮಿ ಯೋಜನೆ: ಫಲಾನುಭವಿಗಳ ಆಯ್ಕೆ   

ಯಳಂದೂರು: ಪಟ್ಟಣದ ರಾಘವೇಂದ್ರಸ್ವಾಮಿ ಮಠ ಹಾಗೂ ಮದ್ದೂರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಯಳಂದೂರು ಕಸಬಾ ಹಾಗೂ ಅಗರ ಹೋಬಳಿ ಗ್ರಾಮದ ಸುವರ್ಣಭೂಮಿ ಫಲಾನುಭವಿಗಳನ್ನು ಸೋಮವಾರ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಯಳಂದೂರು ಕಸಬಾ: ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 2011-12 ನೇ ಸಾಲಿನಲ್ಲಿ  ಬಾಕಿ ಉಳಿದ 74 ಆರ್ಜಿಗಳಲ್ಲಿ ಕೃಷಿ ಇಲಾಖೆಯ ವತಿಯಿಂದ 17  ಮಂದಿ ಆಯ್ಕೆ ಮಾಡಲಾಯಿತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿರಿಸಿದ್ದ 343 ಜನರಲ್ಲಿ 83 ಜನರನ್ನು ಆಯ್ಕೆ ಮಾಡಲಾಯಿತು.

ಮೀನುಗಾರಿಕಾ ಇಲಾಖೆಯಿಂದ ಪರಿಶಿಷ್ಟ ಜಾತಿಯ 15 ಅರ್ಜಿಯಲ್ಲಿ ಇಬ್ಬರು, ಪರಿಶಿಷ್ಟ ಪಂಗಡದ 14 ಜನರಲ್ಲಿ ಇಬ್ಬರು ಹಾಗೂ ಸಾಮಾನ್ಯ ವರ್ಗದ 12 ಅರ್ಜಿಗಳಲ್ಲಿ  6 ಜನರನ್ನು ಆಯ್ಕೆ ಮಾಡಲಾಯಿತು.

ತೋಟಗಾರಿಕಾ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ 24 ಅರ್ಜಿಗಳಲ್ಲಿ 6, ಪರಿಶಿಷ್ಟ ಪಂಗಡದ 21 ಅರ್ಜಿಗಳಲ್ಲಿ 4 ಹಾಗೂ ಇತರೆ 99 ಅರ್ಜಿಗಳಲ್ಲಿ 29 ಜನರನ್ನು ಆಯ್ಕೆ ಮಾಡಲಾಯಿತು.

ಅಗರ ಹೋಬಳಿ: ಅಗರ ಹೋಬಳಿಯಲ್ಲಿ ಕೃಷಿ ಇಲಾಖೆಯ ಪರಿಶಿಷ್ಟ ಜಾತಿಯ 70 ಅರ್ಜಿಗಳಲ್ಲಿ 14 ಜನ, ಸಾಮಾನ್ಯ ವರ್ಗದ 67 ಅರ್ಜಿಗಳಲ್ಲಿ 12 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ತೋಟಗಾರಿಕಾ ಇಲಾಖೆಯಿಂದ ಪರಿಶಿಷ್ಟ ಜಾತಿಯ 67 ಅರ್ಜಿಗಳಲ್ಲಿ 8 ಜನ, ಪರಿಶಿಷ್ಟ ಪಂಗಡದ 35 ಜನರಲ್ಲಿ 5 ಜನ ಹಾಗೂ ಸಾಮಾನ್ಯ ವರ್ಗದ 207 ಜನರಲ್ಲಿ 35 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಮೀನುಗಾರಿಕಾ ಇಲಾಖೆಯ ವತಿಯಿಂದ ಪರಿಶಿಷ್ಟಜಾತಿಯ 15 ಅರ್ಜಿಗಳಲ್ಲಿ ಇಬ್ಬರು, ಪರಿಶಿಷ್ಟ ಪಂಗಡದ 14 ಅರ್ಜಿಗಳಲ್ಲಿ ಇಬ್ಬರು ಹಾಗೂ ಸಾಮಾನ್ಯ ವರ್ಗದ 12 ಜನರಲ್ಲಿ 6 ಜನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು,

ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಮೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರತಿಭಾ ನೋಡಲ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಕೃಷಿ ಇಲಾಖೆಯ ವೆಂಕಟರಂಗಶೆಟ್ಟಿ, ಕೃಷಿ ಸಮಾಜದ ಅಧ್ಯಕ್ಷ ವಕೀಲ ಮಾದೇಶ್, ತೋಟಗಾರಿಕಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ನಂಜಯ್ಯ, ಭಾಸ್ಕರ್ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ,  ರೈತರು ಹಾಜರಿದ್ದರು.

ಹನೂರು: 616 ಮಂದಿಗೆ ಅವಕಾಶ
ಕೊಳ್ಳೇಗಾಲ: ತಾಲ್ಲೂಕಿನ ಹನೂರು ಹೋಬಳಿ ಸುವರ್ಣಭೂಮಿ ಯೋಜನೆಯಡಿ ಹನೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಕೃಷಿ ಇಲಾಖೆಗೆ 2778ರಲ್ಲಿ 450, ತೋಟಗಾರಿಕೆ 961ರಲ್ಲಿ 162, ಮೀನುಗಾರಿಕೆ 9ರಲ್ಲಿ 4 ಜನರನ್ನು ಸುವರ್ಣಭೂಮಿ ಯೋಜನೆಯಡಿ ಒಟ್ಟು 616 ಫಲಾನುಭವಿಗಳನ್ನು ಆಯ್ಕೆಮಾಡಲಾಯಿತು.

ತೋಟಗಾರಿಕೆ ಉಪ ನಿರ್ದೇಶಕ ಗಿರೀಶ್, ಕೃಷಿ ಅಧಿಕಾರಿ ಮನೋಹರ್, ಸಹಾಯಕ ತೋಟಗಾರಿಕೆ ಅಧಿಕಾರಿ ಕೆಂಪರಾಜು, ರಾಜಸ್ವ ನಿರೀಕ್ಷಕ ರಾಜಕಾಂತ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರುಳಿ, ಗ್ರಾಮ ಲೆಕ್ಕಿಗ ಮಲ್ಲೇಶ್ ಇತರರು ಇದ್ದರು.

1942 ಫಲಾನುಭವಿಗಳ ಆಯ್ಕೆ
ಗುಂಡ್ಲುಪೇಟೆ: 2012-13ನೇ ಸಾಲಿನಲ್ಲಿ ಸುವರ್ಣ ಭೂಮಿ ಯೋಜನೆಯಡಿ 1,942 ರೈತರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ  ಎನ್. ಲೀಲಾವತಿ ಸೋಮವಾರ ಹೇಳಿದರು.

ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸುವರ್ಣ ಭೂಮಿ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ರೈತ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.

ಹಂಗಳ ಹೋಬಳಿಯಲ್ಲಿ 363 ಸಾಮಾನ್ಯ, 80 ಪರಿಶಿಷ್ಟ ಜಾತಿ ಹಾಗೂ 43 ಪರಿಶಿಷ್ಟ ಪಂಗಡ, ಬೇಗೂರು ಹೋಬಳಿಯಲ್ಲಿ 364 ಸಾಮಾನ್ಯ, 80 ಪರಿಶಿಷ್ಟ ಜಾತಿ ಹಾಗೂ 41 ಪರಿಶಿಷ್ಟ ಪಂಗಡ, ತೆರಕಣಾಂಬಿ ಹೋಬಳಿಯಲ್ಲಿ 364 ಸಾಮಾನ್ಯ, 79 ಪರಿಶಿಷ್ಟ ಜಾತಿ ಹಾಗೂ 42 ಪರಿಶಿಷ್ಟ ಪಂಗಡ, ಕಸಬಾ ಹೋಬಳಿಯಲ್ಲಿ 364 ಸಾಮಾನ್ಯ, 80 ಪರಿಶಿಷ್ಟ ಜಾತಿ ಹಾಗೂ 41 ಪರಿಶಿಷ್ಟ ಪಂಗಡದ ರೈತರುಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಟಿ. ರಾಜಣ್ಣ ಮಾತನಾಡಿ, ಕಸಬಾ ಹೋಬಳಿಯಲ್ಲಿ ಸಾಮಾನ್ಯ 209, ಪರಿಶಿಷ್ಟ ಜಾತಿ 16, ಬೇಗೂರು ಹೋಬಳಿ ಪರಿಶಿಷ್ಟ ಜಾತಿ 16, ಸಾಮಾನ್ಯ 187, ಹಂಗಳ ಹೋಬಳಿ ಪರಿಶಿಷ್ಟ ಜಾತಿ 60, ಪರಿಶಿಷ್ಟ ಪಂಗಡ 18, ಸಾಮಾನ್ಯ 198 ಹಾಗೂ ತೆರಕಣಾಂಬಿ ಹೋಬಳಿ ಸಾಮಾನ್ಯ 176, ಪರಿಶಿಷ್ಟ ಜಾತಿ 19 ಹಾಗೂ ಪರಿಶಿಷ್ಟ ಪಂಗಡ 17 ರೈತರುಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿದ್ದು ಸರ್ಕಾರದಿಂದ ದೊರೆಯುವ ಸೌಲಭ್ಯ ವಿತರಿಸಲಾಗುವುದು ಎಂದರು.

ನೋಡಲ್ ಅಧಿಕಾರಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ನಾಗರತ್ನಮ್ಮ, ವಲಯ ಅರಣ್ಯಾಧಿಕಾರಿ ಸತೀಶ್, ರೇಷ್ಮೆ ವಿಸ್ತರಣಾಧಿಕಾರಿ ಶಿವಪಾದಪ್ಪ, ಸಹಾಯಕ ರೇಷ್ಮೆ ನಿರ್ದೇಶಕ ಗಿರೀಶ್ ರವರು ಕಾರ್ಯ ನಿರ್ವಹಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಶಾರದಮ್ಮ ಹಾಗೂ ಹಂಗಳ ಹೋಬಳಿ ರೈತರುಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.