ADVERTISEMENT

ಆನೆ ಮರಿ ಬೇಟೆಯಾಡಿದ ಹುಲಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 16:02 IST
Last Updated 27 ಡಿಸೆಂಬರ್ 2024, 16:02 IST
ಬಂಡೀಪುರ ಅಭಯಾರಣ್ಯದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯ ವ್ಯಾಪ್ತಿಯ ಹಿರೀಕೆರೆ ಭಾಗದಲ್ಲಿ ಹುಲಿಯು ಆನೆಮರಿಯೊಂದನ್ನು ಬೇಟೆಯಾಡಿರುವುದನ್ನು ಸಿಬ್ಬಂದಿ ವೀಕ್ಷಿಸಿದರು
ಬಂಡೀಪುರ ಅಭಯಾರಣ್ಯದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯ ವ್ಯಾಪ್ತಿಯ ಹಿರೀಕೆರೆ ಭಾಗದಲ್ಲಿ ಹುಲಿಯು ಆನೆಮರಿಯೊಂದನ್ನು ಬೇಟೆಯಾಡಿರುವುದನ್ನು ಸಿಬ್ಬಂದಿ ವೀಕ್ಷಿಸಿದರು   

ಗುಂಡ್ಲುಪೇಟೆ: ಎರಡು ತಿಂಗಳು ವಯಸ್ಸಿನ ಆನೆ ಮರಿಯೊಂದನ್ನು ಹುಲಿ ಬೇಟೆಯಾಡಿ ಕೊಂದು ಹಾಕಿರುವ ಘಟನೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯ ವ್ಯಾಪ್ತಿಯ ಹಿರೀಕೆರೆ ಭಾಗದಲ್ಲಿ ನಡೆದಿದೆ.

ಹುಲಿಯು ಕಳೆದ ಎರಡು ದಿನಗಳ ಹಿಂದೆ ಬೇಟೆಯಾಡಿ ಸ್ವಲ್ಪ ತಿಂದು ಹೋಗಿದೆ ಎನ್ನಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಆನೆಮರಿ ಕಳೇಬರ ಕಂಡು ಬಂದಿದೆ. ನಂತರ ಮೇಲಾಧಿಕಾರಿಗಳು ಗಮನಕ್ಕೆ ತಂದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆನೆಮರಿಯನ್ನು ಹುಲಿ ಬೇಟೆಯಾಡಿ ಸಾಯಿಸಿ ಸ್ವಲ್ಪ ತಿಂದಿದೆ. ಇಂತಹ ಘಟನೆಗಳು ಆಗಾಗ್ಗೆ ಬಂಡೀಪುರ ಅಭಯಾರಣ್ಯದಲ್ಲಿ ನಡೆಯುತ್ತಿದ್ದು, ಮರಿಯಾನೆಯು ಒಂಟಿಯಾಗಿರುವುದನ್ನು ಗಮನಿಸಿ ಹುಲಿ ಬೇಟೆಯಾಡಿದೆ. ಆನೆಯ ಕಳೇಬರವನ್ನು ನಿಯಮಾನುಸಾರ ಅರಣ್ಯದಲ್ಲೇ ಬಿಡಲಾಗಿದೆ ಎಂದು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.