
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ಸಫಾರಿ ಕೇಂದ್ರದ ಕೌಂಟರ್ ಮುಂದೆ ಟಿಕೆಟ್ ಖರೀದಿಸಲು ನಿಂತಿದ್ದ ಪ್ರವಾಸಿಗರು
ಪ್ರಜಾವಾಣಿ ಚಿತ್ರ
ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಸಫಾರಿ ಮರು ಆರಂಭವಾಯಿತು. ಮಧ್ಯಾಹ್ನ 3 ಗಂಟೆಗೆ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಿಂದ ನಾಲ್ಕು ಮಿನಿ ಬಸ್‌ಗಳು ಹಾಗೂ ಮೂರು ಜಿಪ್ಸಿ ವಾಹನಗಳು ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ದವು.
ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಫಾರಿ ಕೇಂದ್ರ, ಗುಂಡ್ಲುಪೇಟೆ, ಹಂಗಳ ಚೆಕ್‌ಪೋಸ್ಟ್ ಹಾಗೂ ಕಲ್ಲಿಗೌಡನಹಳ್ಳಿ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಫೆ.23ರಿಂದ ಪ್ರತಿದಿನ ಐದು ತಾಸು ಸಫಾರಿ ನಡೆಯಲಿದ್ದು ಬೆಳಿಗ್ಗೆ 6.30ರಿಂದ 9 ಗಂಟೆ ಹಾಗೂ ಮಧ್ಯಾಹ್ನ 3.30ರಿಂದ 6ಗಂಟೆಯವರೆಗೆ ಸಫಾರಿಗೆ ಅನುಮತಿಸಲಾಗಿದೆ.
ಅರಣ್ಯ ಇಲಾಖೆ ಹಾಗೂ ಜಂಗಲ್ ರೆಸಾರ್ಟ್ ಲಾಡ್ಜ್‌ನ ವಾಹನಗಳಲ್ಲಿ ಪ್ರವಾಸಿಗರು ಸಫಾರಿಗೆ ತೆರಳಬಹುದು. ಮಾನವ ಪ್ರಾಣಿ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ ನ.7ರಂದು ಸರ್ಕಾರ ಸಫಾರಿಗೆ ತಾತ್ಕಲಿಕ ನಿರ್ಬಂಧ ಹೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.