ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಫೆ.28ರಂದು ಬುಧವಾರ ಗ್ರಾಮದೇವತೆ ಮಾರಮ್ಮನ ಹಬ್ಬ ವಿಜೃಂಭಣೆಯಿಂದ ನಡೆಯಲಿದೆ. ಗ್ರಾಮದ ಎಲ್ಲಾ ಕೋಮಿನವರು ಒಗ್ಗೂಡಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಸಭೆ ನಡೆಸಿ ಗ್ರಾಮದೇವತೆ ಮಾರಮ್ಮನ ಹಬ್ಬ ಆಚರಿಸಲು ನಿರ್ಧರಿಸಲಾಯಿತು.
ದೇವಾಲಯದ ಆವರಣದಲ್ಲಿ ವಿಶೇಷ ಹೋಮಗಳು ನಡೆಯಲಿದ್ದು, ಮಾರಮ್ಮನ ಮೂರ್ತಿಗೆ ವಿಶೇಷ ಅಭಿಷೇಕಗಳು ನಡೆಯಲಿವೆ. ನಂತರ ದೇವಿಯನ್ನು ವಿಶೇಷ ಹೂವಿನಿಂದ ಅಲಂಕರಿಸಿ ಗ್ರಾಮದ ಎಲ್ಲಾ ಕೋಮಿನವರು ಒಗ್ಗಟ್ಟಾಗಿ ರಾತ್ರಿಯಿಂದ ಬೆಳಗಿನವರೆಗೆ ಪೂಜೆ ಸಲ್ಲಿಸುವುದು ಎಂದು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.