ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ಹುಂಡಿ ಹಣದ ಎಣಿಕೆ ಮಂಗಳವಾರ ನಡೆಯಿತು.
ಬೆಳಿಗ್ಗೆ 10ಕ್ಕೆ ಆರಂಭವಾದ ಹಣದ ಎಣಿಕೆ ಕಾರ್ಯ ಸಂಜೆ ತನಕ ನಡೆಯಿತು. ಒಟ್ಟು₹21,25,500 ಲಕ್ಷ ಸಂಗ್ರಹವಾಗಿದ್ದು, ದೇವಾಲಯದ ಕರ್ನಾಟಕ ಬ್ಯಾಂಕ್ ಖಾತೆಗೆ ಕಾಣಿಕೆ ಹಣ ಜಮಾ ಮಾಡಲಾಯಿತು.
ಅಮೆರಿಕನ್ ನಾಣ್ಯ 35, ಮಲೇಷ್ಯಾ 1, ಚೀನಾ 1 ಹಾಗೂ ಅರಬ್ 1 ನಾಣ್ಯ ಸೇರಿ 38 ನಾಣ್ಯಗಳು ಹುಂಡಿಯಲ್ಲಿ ದೊರೆತಿವೆ.
ತಹಶೀಲ್ದಾರ್ ಆರ್.ಜಯಪ್ರಕಾಶ್, ಉಪ ತಹಶೀಲ್ದಾರ್ ಮಾದೇಶ್, ರಾಜಸ್ವ ನಿರೀಕ್ಷಕ ಎಂ.ಎಸ್.ಯದುಗಿರಿ, ರಮೇಶ್, ದೇವಳ ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್, ದೇವಸ್ಥಾನ ಪಾರುಪತ್ತೆಗಾರ ರಾಜು, ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ಪೊಲೀಸರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.