ADVERTISEMENT

ಚಾಮರಾಜನಗರ: ದುಬೈನಲ್ಲಿ ಸಿಲುಕಿದ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:22 IST
Last Updated 2 ಮಾರ್ಚ್ 2026, 2:22 IST
   

ಯಳಂದೂರು (ಚಾಮರಾಜನಗರ ಜಿಲ್ಲೆ): ಇರಾನ್‌ ಹಾಗೂ ಅಮೆರಿಕಾ ಇಸ್ರೇಲ್‌ ನಡುವಿನ ಯುದ್ಧದ ಪರಿಣಾಮ ದುಬೈನಲ್ಲಿ ವಿಮಾನ ಸಂಚಾರ ಸೇವೆ ಸ್ಥಗಿತವಾಗಿರುವುದರಿಂದ ಪಟ್ಟಣದ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ ದುಬೈನಲ್ಲಿ ಸಿಲುಕಿದ್ದಾರೆ.

ಈಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ನಂಜುಂಡಯ್ಯ ತವರಿಗೆ ಮರಳಲು ವಿಮಾನ ಸೇವೆ ಅಲಭ್ಯತೆಯಿಂದ ದುಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ತಂಗಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ ಸುರಕ್ಷಿತವಾಗಿರುವುದಾಗಿ ಸ್ನೇಹಿತರಿಗೆ ಖಚಿತ ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT