ADVERTISEMENT

ಡ್ರಗ್ಸ್‌ ನಿಯಂತ್ರಣ: ಪೊಲೀಸ್‌ ಇಲಾಖೆಯಿಂದ ಸಹಾಯವಾಣಿ 1908 ಆರಂಭ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 12:45 IST
Last Updated 29 ಅಕ್ಟೋಬರ್ 2020, 12:45 IST
ಮಾದಕವಸ್ತುಗಳ ವಿರೋಧಿ ಅಭಿಯಾನದ ಕರಪತ್ರವನ್ನು ಎಸ್‌ಪಿ ದಿವ್ಯ ಸಾರಾ ಥಾಮಸ್‌ ಅವರು ಬಿಡುಗಡೆ ಮಾಡಿದರು. ಎಎಸ್‌ಪಿ ಅನಿತಾ ಬಿ.ಹದ್ದಣ್ಣವರ್‌, ಡಿವೈಎಸ್‌ಪಿ ಅನ್ಸರ್‌ ಅಲಿ ಇತರರು ಇದ್ದರು
ಮಾದಕವಸ್ತುಗಳ ವಿರೋಧಿ ಅಭಿಯಾನದ ಕರಪತ್ರವನ್ನು ಎಸ್‌ಪಿ ದಿವ್ಯ ಸಾರಾ ಥಾಮಸ್‌ ಅವರು ಬಿಡುಗಡೆ ಮಾಡಿದರು. ಎಎಸ್‌ಪಿ ಅನಿತಾ ಬಿ.ಹದ್ದಣ್ಣವರ್‌, ಡಿವೈಎಸ್‌ಪಿ ಅನ್ಸರ್‌ ಅಲಿ ಇತರರು ಇದ್ದರು   

ಚಾಮರಾಜನಗರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ (ಡ್ರಗ್ಸ್‌) ನಿಯಂತ್ರಣಕ್ಕಾಗಿ ಪೊಲೀಸ್‌ ಇಲಾಖೆ ಅಭಿಯಾನ ಆರಂಭಿಸಿದ್ದು, ಪ್ರತ್ಯೇಕ ಸಹಾಯವಾಣಿ–1908 ಆರಂಭಿಸಿದೆ.

ಜಿಲ್ಲಾ ಪೊಲೀಸ್‌ ಇಲಾಖೆಯ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ದಿವ್ಯ ಸಾರಾ ಥಾಮಸ್‌ ಅವರು ಗುರುವಾರ ಸಹಾಯವಾಣಿಗೆ ಚಾಲನೆ ನೀಡಿದ್ದಾರೆ.

‘ಮಾದಕ ವಸ್ತುಗಳ ಕೃಷಿ, ತಯಾರಿಕೆ, ವಶದಲ್ಲಿಟ್ಟುಕೊಳ್ಳುವುದು, ಸಂಗ್ರಹಣೆ ಮಾಡುವುದು, ಸಂಚು ಮಾಡುವುದು, ನೆರವು ನೀಡುವುದು, ಆಶ್ರಯ ನೀಡುವುದು, ಅಕ್ರಮ ಸಾಗಣಿಕೆ ಮಾಡುವುದು ಮತ್ತು ಸೇವನೆ ಮಾಡುವುದು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಇಂತಹ ಪ್ರಕರಣಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಹೊಸ ಸಹಾಯವಾಣಿ–1908ಕ್ಕೆ ಕರೆ ಮಾಡಬಹುದು. ಮಾಹಿತಿದಾರರ ವಿವರಗಳನ್ನು ಗೋಪ್ಯವಾಗಿ ಇಡಲಾಗುವುದು’ ಎಂದು ಎಸ್‌ಪಿ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.