ADVERTISEMENT

ಕಾಡಾನೆ ದಾಳಿ; ಸೂಕ್ತ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:34 IST
Last Updated 17 ಜೂನ್ 2025, 15:34 IST
ಕಾಡಾನೆಗಳು ನುಗ್ಗಿ ಜೋಳದ ಫಸಲು ನಾಶಗೊಳಿಸಿರುವುದು
ಕಾಡಾನೆಗಳು ನುಗ್ಗಿ ಜೋಳದ ಫಸಲು ನಾಶಗೊಳಿಸಿರುವುದು   

ಹನೂರು: ತಾಲ್ಲೂಕಿನ ಅಜ್ಜೀಪುರ ಸಮೀಪದ ಜಿ.ಆರ್.ನಗರ ಗ್ರಾಮದಲ್ಲಿ ವರದರಾಜು ಎಂಬುವವರ ಜಮೀನಿಗೆ ಕಾಡಾನೆಗಳು ನುಗ್ಗಿ ಒಂದು ಎಕರೆ ಜೋಳದ ಫಸಲು ನಾಶಗೊಳಿಸಿವೆ.

ಮಲೆಮಹದೇಶ್ವರ ವನ್ಯಧಾಮದ ಹನೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿರುವ ಕಾಡಾನೆಗಳು ಕಳೆದ ಎರಡು ದಿನಗಳಿಂದ ನಿರಂತವಾಗಿ ಜಮೀನಿಗೆ ಲಗ್ಗೆ ಇಡುತ್ತಿವೆ. ಇದರ ಪರಿಣಾಮ ಎರಡು ಎಕರೆಯಲ್ಲಿ ಬೆಳೆದಿದ್ದ ಜೋಳದ ಫಸಲಿನ ಪೈಕಿ ಒಂದು ಎಕರೆಯಷ್ಟು ಫಸಲುನ್ನು ತಿಂದು ಹಾಕಿವೆ. ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ವರದರಾಜು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT