
ಚಾಮರಾಜನಗರ: ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಡಾ.ಮಾಲತಿ ಪ್ರಿಯಾ ಗುರುವಾರ ಅಧಿಕಾರ ಸ್ವೀಕರಿಸಿದರು. ಟಿ.ಹೀರಾಲಾಲ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಾಲತಿ ಪ್ರಿಯಾ ಅವರನ್ನು ನಿಯೋಜಿಸಲಾಗಿದೆ.
ಹಿಂದೆ ಮೈಸೂರು ಸಿಎಫ್ (ವರ್ಕಿಂಗ್ ಪ್ಲಾನ್) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಾಲತಿ ಪ್ರಿಯಾ ಅವರಿಗೆ ಸಿಸಿಎಫ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಕ್ಕೂ ಮುನ್ನ ಚಾಮರಾಜನಗರ ವೃತ್ತದ ಪ್ರಭಾರ ಸಿಸಿಎಫ್ ಆಗಿ, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಆಗಿಯೂ ಅವರು ಕರ್ತವ್ಯ ನಿಭಾಯಿಸಿದ್ದಾರೆ.
ಪ್ರಕಾಶ್‌ಕರ್ ವರ್ಗಾವಣೆ:
ಬಿಆರ್‌ಟಿ ಹುಲಿ ಸಂರಕ್ಷಿತ ವಲಯ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಿಭಾಗದ ಎಸಿಎಫ್ ಆಗಿದ್ದ ಪ್ರಕಾಶಕ್‌ರ್ ಅಕ್ಷಯ್ ಅಶೋಕ್ ಅವರಿಗೆ ಪದೋನ್ನತಿ ನೀಡಿ ಹಾವೇರಿ ವಿಭಾಗದ ಡಿಸಿಎಫ್ ಆಗಿ ವರ್ಗಾವಣೆ ಮಾಡಲಾಗಿದೆ.
ಎಂಎಂ ಹಿಲ್ಸ್ ವನ್ಯಧಾಮ ಉಪ ವಲಯದ ಎಸಿಎಫ್ ಸ್ವಪ್ನಿಲ್ ಮನೋಹರ್ ಅಹಿರೆ ಅವರಿಗೆ ಹಿರಿಯ ಎಸಿಎಫ್ ಹುದ್ದೆಗೆ ಪದೋನ್ನತಿ ನೀಡಲಾಗಿದ್ದು ಹಾಲಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಡಿಸಿಎಫ್ ಬಿ.ಎಸ್.ಶ್ರೀಪತಿ ಅವರಿಗೆ ಕಿರಿಯ ಆಡಳಿತ ಗ್ರೇಡ್–12ಕ್ಕೆ ಪದೋನ್ನತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.