ADVERTISEMENT

ಸುಳ್ವಾಡಿ, ಮಾರ್ಟಳ್ಳಿ ಗ್ರಾಮದ ಕುಡಿಯುವ ನೀರಿನಲ್ಲಿ ಅಪಾಯಕಾರಿ ಫ್ಲೋರೆಡ್ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:15 IST
Last Updated 4 ಫೆಬ್ರುವರಿ 2026, 2:15 IST
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮಪಂಚಾಯಿತಿಯ ಸುಳ್ವಾಡಿ ಹಾಗೂ ಮಾರ್ಟಳ್ಳಿ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪ ವಿಭಾಗದ ಅಧಿಕಾರಿಗಳು ಬೇಟಿ ನೀಡಿ ಕುಡಿಯುವ ನೀರನ್ನು ಸಾರ್ವಜನಿಕರ ಮುಂದೆ ಪರೀಕ್ಷೆಗೊಳಪಡಿಸಿದರು
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮಪಂಚಾಯಿತಿಯ ಸುಳ್ವಾಡಿ ಹಾಗೂ ಮಾರ್ಟಳ್ಳಿ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪ ವಿಭಾಗದ ಅಧಿಕಾರಿಗಳು ಬೇಟಿ ನೀಡಿ ಕುಡಿಯುವ ನೀರನ್ನು ಸಾರ್ವಜನಿಕರ ಮುಂದೆ ಪರೀಕ್ಷೆಗೊಳಪಡಿಸಿದರು   

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ಸುಳ್ವಾಡಿ ಹಾಗೂ ಮಾರ್ಟಳ್ಳಿ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪ ವಿಭಾಗದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿದರು.

ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ ಹಾಗೂ ಕುಡಿಯುವ ನೀರಿನಲ್ಲಿ ಪ್ಲೋರೇಡ್ ಮಿಶ್ರಿತವಾಗಿದ್ದು ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂಬ ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಬಂದ ಅಧಿಕಾರಿಗಳು ‘ಫೀಲ್ಡ್ ಟೆಸ್ಟ್ ಕಿಟ್’ಗಳ ಮೂಲಕ ಕೊಳವೆ ಬಾವಿಗಳ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದರು.‌

ಸೂಲ್ವಾಡಿ ಹಾಗೂ ಮಾರ್ಟಳ್ಳಿಯಲ್ಲಿ ಐದು ಕಡೆ ನೀರನ್ನು ಸಾರ್ವಜನಿಕರ ಮುಂದೆ ಪರೀಕ್ಷಿಸಲಾಯಿತು. ಈ ಸಂದರ್ಭ ಯಾವುದೇ ರೀತಿಯ ಫ್ಲೋರೆಡ್ ಅಂಶ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಆದೇಶದ ಮೇರೆಗೆ ಸುಳ್ವಾಡಿ ಗ್ರಾಮದಲ್ಲಿ 950 ಅಡಿ ಆಳದ ಕೊಳವೆ ಬಾವಿ, ಹಾಗೂ ಮಾರ್ಟಳ್ಳಿಯಲ್ಲಿ 700 ಅಡಿ ಆಳದ ಕೊಳವೆ ಬಾವಿಯ ನೀರು ಹಾಗೂ ಸಾರ್ವಜನಿಕರು ತಂದು ಕೊಟ್ಟ ನೀರನ್ನೂ ಸ್ಥಳದಲ್ಲಿಯೇ ಪರೀಕ್ಷಿಸಲಾಯಿತು. ಅಪಾಯಕಾರಿಯಷ್ಟು ಫ್ಲೋರೆಡ್ ಅಂಶ ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ಮತ್ತು ನೈರ್ಮಲಕ್ಯ ವಿಭಾಗದ ಎಇಇ ಸುಧನ್ವನಾಗ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ಮತ್ತು ನೈರ್ಮಲಕ್ಯ ವಿಭಾಗದ ಇಇ ಸಂತೋಷ್ ಕುಮಾರ್, ಎಇ ಶಶಿಕುಮಾರ್, ಪ್ರಯೋಗಾಲಯ ವಿಶ್ಲೇಷಕ ಅನಿಲ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.