
ಪ್ರಜಾವಾಣಿ ವಾರ್ತೆ
ಹನೂರು: ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಗೋವಿದಯ್ಯ ಅವರ ಜಮೀನಿನಲ್ಲಿ ಶನಿವಾರ ರಾತ್ರಿ ಕಾಡಾನೆಗಳು ದಾಳಿ ಮಾಡಿ, ಮುಸುಕಿನ ಜೋಳ, ಸೋಲಾರ್ ತಂತಿಯನ್ನು ತುಳಿದು ನಾಶಮಾಡಿವೆ.
‘ ಅನೇಕ ದಿನಗಳಿಂದ ಕಾಡುಪ್ರಾಣಿಗಳು ನಿರಂತರ ಜಮೀನಿಗೆ ಲಗ್ಗೆ ಹಾಕುತ್ತಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಜೋಳ, ತೆಂಗಿನಕಾಯಿ ಮತ್ತು ಇತರ ಫಸಲುಗಳು ಹಾನಿಗೊಳಗಾಗುತ್ತಿವೆ” ಎಂದು ಹೇಳಿದರು. ಸರ್ಕಾರ ತಕ್ಷಣ ಕ್ರಮ ಕೈಗೊಂದು ನಿಯಂತ್ರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.