ADVERTISEMENT

ಮೇಕೆಗಳು ನಡೆದಾಡುವ ಎಟಿಎಂ: ಶಾಸಕ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:31 IST
Last Updated 8 ಆಗಸ್ಟ್ 2025, 2:31 IST
ಯಳಂದೂರು ತಾಲ್ಲೂಕಿನ ಮುರುಟಿಪಾಳ್ಯ ಗ್ರಾಮದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿರಿವಾಸಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮೇಕೆಗಳನ್ನು ವಿತರಿಸಿದರು 
ಯಳಂದೂರು ತಾಲ್ಲೂಕಿನ ಮುರುಟಿಪಾಳ್ಯ ಗ್ರಾಮದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿರಿವಾಸಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮೇಕೆಗಳನ್ನು ವಿತರಿಸಿದರು    

ಯಳಂದೂರು: ಸರ್ಕಾರದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗಿರಿಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು.ಮೇಕೆಗಳು ನಡೆದಾಡುವ ಏಟಿಎಂ ಆಗಿದ್ದು, ಸಂಪತ್ತಿನ ಜಾನುವಾರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮುರುಟಿಪಾಳ್ಯ ಗ್ರಾಮದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿರಿವಾಸಿಗಳಿಗೆ ಮೇಕೆಗಳನ್ನು ವಿತರಿಸಿ ಅವರು ಮಾತನಾಡಿದರು.

ಸೋಲಿಗರಿಗೆ ಮೈಕ್ರೊ ಕ್ರೆಡಿಟ್ ಪ್ರೇರಣ ಯೋಜನೆಯಡಿ ಒಂದು ಕುಟುಂಬಕ್ಕೆ ₹25 ಸಾವಿರ ವೆಚ್ಚದಲ್ಲಿ ಮೇಕೆಗಳನ್ನು ನೀಡಲಾಗುತ್ತದೆ. 10 ಕುಟುಂಬಕ್ಕೆ ₹2.50 ಲಕ್ಷ ಮೌಲ್ಯದ ಆಡುಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳನ್ನು ಸಾಕಣೆ ಮಾಡುವ ಜೊತೆಯಲ್ಲಿ ಉಪ ಕಸುಬುಗಳನ್ನು ಕಲಿತು ಆದಾಯ ಹೆಚ್ಚಿಸಿಕೊಳ್ಳಬೇಕು. ಸೋಲಿಗರನ್ನು ಅಲೆಮಾರಿ ಕುಟುಂಬಗಳ ಸಾಲಿಗೆ ಸೇರಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.

ADVERTISEMENT

ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಪಶು ಇಲಾಖೆಯ ಅಧಿಕಾರಿ ನವೀನ್, ಆರ್‌ಎಫ್ಒ ಸತೀಶ್, ರೇವಣ್ಣ, ಗ್ರಾ.ಪಂ. ಸದಸ್ಯರು ಹಾಗೂ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.