
ಪ್ರಜಾವಾಣಿ ವಾರ್ತೆ
ಗುಂಡ್ಲುಪೇಟೆ: ಬೆಂಗಳೂರಿನ ಚಿಕ್ಕತಿರುಪತಿಯ ವೆಲ್ ಪ್ರಿಂಗ್ಸ್ ಅಕಾಡೆಮಿಯಲ್ಲಿ ನಡೆದ 15 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ರಗ್ಬಿ ಚಾಂಪಿಯನ್‌ಶಿಪ್‌ನಲ್ಲಿ ಗುಂಡ್ಲುಪೇಟೆ ಬಾಲಕಿಯರ ತಂಡವು ಸತತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯಾವಳಿಯಲ್ಲಿ ಚಾಮರಾಜನಗರ ತಂಡವು ಚಿತ್ರದುರ್ಗ ವಿರುದ್ಧ 5-0, ಕೊಡಗು ವಿರುದ್ಧ 25-0, ಬೆಂಗಳೂರು ನಗರ ವಿರುದ್ಧ 5-5, ಸೆಮಿಫೈನಲ್‌ನಲ್ಲಿ ಮೈಸೂರು ವಿರುದ್ಧ 20-0, ಫೈನಲ್‌ನಲ್ಲಿ ಬೆಂಗಳೂರು ನಗರ ವಿರುದ್ಧ 5-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ವಿಜೇತ ಚಾಮರಾಜನಗರ ಜಿಲ್ಲಾ ತಂಡವನ್ನು ಜಿಲ್ಲಾ ರಗ್ಬಿ ಅಸೋಸಿಯೇಷನ್ ಅಧ್ಯಕ್ಷ ಭರತ್ ಕುಮಾರ್, ಕಾರ್ಯದರ್ಶಿ ದೊಡ್ಡಪ್ಪಾಜಿ, ತರಬೇತುದಾರರಾದ ನಾಗೇಂದ್ರ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.