ADVERTISEMENT

ಹನೂರು: ರಾತ್ರಿ ವೇಳೆ ಶಾಲೆಯ ಬಾಗಿಲು ಮುರಿದು ಒಳ ನುಗ್ಗಿದ ಕರಡಿ

ಆಹಾರ ಪದಾರ್ಥಗಳನ್ನು ತಿನ್ನುವುದರ ಜತೆಗೆ ಪೀಠೋಪಕರಣಗಳನ್ನು ಮುರಿದು ಹಾಕಿದೆ.

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 4:54 IST
Last Updated 15 ಡಿಸೆಂಬರ್ 2023, 4:54 IST
<div class="paragraphs"><p>ಬಾಗಿಲು ಮುರಿದು ಒಳ ನುಗ್ಗಿದ ಕರಡಿ</p></div>

ಬಾಗಿಲು ಮುರಿದು ಒಳ ನುಗ್ಗಿದ ಕರಡಿ

   

ಹನೂರು (ಚಾಮರಾಜನಗರ): ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಸಂದನಪಾಳ್ಯ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ ಮಧ್ಯರಾತ್ರಿ ಕರಡಿಯೊಂದು ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುವುದರ ಜತೆಗೆ ಪೀಠೋಪಕರಣಗಳನ್ನು ಮುರಿದು ಹಾಕಿದೆ.

ರಾತ್ರಿ 1 ಗಂಟೆ ಸಮಯದಲ್ಲಿ ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕರಡಿ ಬೀರುಬಾಗಿಲನ್ನು‌ ಮುರಿದು ಅದರೊಳಗಿದ್ದ ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ತಿಂದಿದೆ.

ADVERTISEMENT

ಕರಡಿ ಬಾಗಿಲು ಮುರಿದು ಒಳನುಗ್ಗುತ್ತಿರುವ ದೃಶ್ಯ ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶುಕ್ರವಾರ ಬೆಳಿಗ್ಗೆ ಮುಖ್ಯಶಿಕ್ಷಕ ಲೂಯಿಸ್ ನೇಸನ್ ಅವರು ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕೊಠಡಿ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಬಳಿಕ ಒಳಗೆ ಹೋಗಿ ಪರಿಶೀಲಿಸಿದಾಗ ಪುಸ್ತಕ, ಆಹಾರ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಸಿಸಿ ಕ್ಯಾಮೆರಾ ನೋಡಿದಾಗ ಕರಡಿ ಒಳನುಗ್ಗಿರುವುದು ಗೊತ್ತಾಗಿದೆ.

ಕೂಡಲೇ ಫಾದರ್ ಟೆನ್ನಿ ಕುರಿಯನ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಟೆನ್ನಿ ಕುರಿಯನ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಎರಡನೇ ಘಟನೆ: ವಾರದ ಹಿಂದೆ ಅಜ್ಜೀಪುರ ಗ್ರಾಮದ ಮದ್ಯದಂಗಡಿ ಬಳಿ ರಾತ್ರಿ ವೇಳೆ ಕರಡಿಯೊಂದು ತಳ್ಳುಗಾಡಿಯನ್ನು ಕೆಳಕ್ಕೆ ಬೀಳಿಸಿ ಅದರಲ್ಲಿದ್ದ ಮೊಟ್ಟೆಯನ್ನು ತಿಂದು ಹಾಳು ಮಾಡಿತ್ತು. ಬಳಿಕ ಕರಡಿಯನ್ನು ಸೆರೆ ಹಿಡಿದಿದ್ದ ಅರಣ್ಯ ಇಲಾಖೆ, ಕಾಡಿಗೆ ಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.