ADVERTISEMENT

ಪ್ರೌಢಶಾಲಾ ಶಿಕ್ಷಕರ ಸಂಘ: ವೀರಭದ್ರಸ್ವಾಮಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 14:17 IST
Last Updated 17 ಜುಲೈ 2022, 14:17 IST
ಚಾಮರಾಜನಗರ ಜಿಲ್ಲಾ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೀರಭದ್ರಸ್ವಾಮಿ, ಕಾರ್ಯದರ್ಶಿಯಾಗಿ ಕಿರಣ್‌ರಾಜ್, ಉಪಾಧ್ಯಕ್ಷರಾಗಿ ಶಾಂತರಾಜ್‌, ಖಜಾಂಚಿ ಮಹೇಶ್‌ ಕುಮಾರ್‌ ಭಾನುವಾರ ಆಯ್ಕೆಯಾದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ಗಮಿತ ಜಿಲ್ಲಾಧ್ಯಕ್ಷ ಸಿದ್ದಮಲ್ಲಪ್ಪ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದಾರೆ

ಚಾಮರಾಜನಗರ: ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೀರಭದ್ರಸ್ವಾಮಿ, ಕಾರ್ಯದರ್ಶಿಯಾಗಿ ಕಿರಣ್‌ರಾಜ್ ಭಾನುವಾರ ಆಯ್ಕೆಯಾದರು.

ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆ ಭಾನುವಾರ ನಡೆಯಿತು. ಜಿಲ್ಲೆಯ ಐದು ತಾಲ್ಲೂಕುಗಳಿಂದ 35 ಶಿಕ್ಷಕ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಿ ಹಕ್ಕು ಚಲಾಯಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವೀರಭದ್ರಸ್ವಾಮಿ 24 ಮತಗಳನ್ನು ಪಡೆದು ಪ್ರತಿಸ್ಪರ್ಧಿ ತ್ಯಾಗರಾಜಮೂರ್ತಿ ಅವರನ್ನು ಸೋಲಿಸಿದರು. ತ್ಯಾಗರಾಜಮೂರ್ತಿಗೆ 11 ಮತಗಳು ಬಿದ್ದವು.

ADVERTISEMENT

ಕಾರ್ಯದರ್ಶಿಯಾಗಿ ಆಯ್ಕೆಯಾದ ಕಿರಣ್‌ರಾಜ್ 24 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ 11 ಮತಗಳನ್ನು ‍ಪಡೆದರು. ಖಜಾಂಚಿಯಾಗಿ ಮಹೇಶ್‌ಕುಮಾರ್, ಉಪಾಧ್ಯಕ್ಷರಾಗಿ ಶಾಂತರಾಜ್ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಬಿ.ಮಹದೇವಸ್ವಾಮಿ ಕಾರ್ಯನಿರ್ವಹಿಸಿದರು.

ಶಿಕ್ಷಕರಾದ ಅರ್ಕಪ್ಪ, ನಿರ್ಮಲಾ, ಮಹದೇವಸ್ವಾಮಿ ಎಸ್, ವಿಜಯಕುಮಾರ್, ತಾಲ್ಲೂಕುಗಳ ಅಧ್ಯಕ್ಷರಾದ ಎಸ್. ಮಂಜುನಾಥ್ (ಚಾಮರಾಜನಗರ), ಗುರುಪ್ರಸಾದ್ (ಗುಂಡ್ಲುಪೇಟೆ), ಅಕ್ಬರ್ (ಕೊಳ್ಳೇಗಾಲ), ಅಶೋಕ್ (ಹನೂರು), ಮಹದೇವ್ (ಯಳಂದೂರು) ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.