ADVERTISEMENT

ಗುಂಡ್ಲುಪೇಟೆ| ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ‌‌; ಪೊಲೀಸರಿಂದ ತಪಾಸಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:51 IST
Last Updated 3 ಫೆಬ್ರುವರಿ 2026, 1:51 IST
<div class="paragraphs"><p>ಗುಂಡ್ಲುಪೇಟೆ ತಾಲ್ಲೂಕಿನ ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಟೋಲ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದು</p></div>

ಗುಂಡ್ಲುಪೇಟೆ ತಾಲ್ಲೂಕಿನ ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಟೋಲ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದು

   

ಗುಂಡ್ಲುಪೇಟೆ: ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ‌‌ ಹೆಚ್ಚಾಗಿರುವುದರಿಂದ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸರು ಅಲರ್ಟ್ ತಪಾಸಣೆ ಚುರುಕುಗೊಳಿಸಿದ್ದಾರೆ.

ಕೇರಳ ಹೆದ್ದಾರಿಯ ಟೋಲ್ ಬಳಿ ಗುಂಡ್ಲುಪೇಟೆ ಠಾಣೆಯಿಂದ ಔಟ್ ಪೋಸ್ಟ್ ತೆರೆದು ಹೆಚ್ಚುವರಿ ಪೊಲೀಸರನ್ನು ನೇಮಕ ಮಾಡಿ ತಾಲ್ಲೂಕಿಗೆ ಆಗಮಿಸುವ-ತೆರಳುವ ಪ್ರತಿಯೊಂದು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ADVERTISEMENT

ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುವ ಚಿನ್ನದ ಉದ್ಯಮಿಗಳನ್ನೇ ಗುರಿಯಾಗಿಸಿ ದರೋಡೆ ಮಾಡುತ್ತಿದ್ದು, ಎರಡು ತಿಂಗಳ ಹಿಂದಷ್ಟೆ ಒಂದು ಕಾಲು ಕೆ.ಜಿ. ಚಿನ್ನ ಲೂಟಿ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಚಿನ್ನದ ಉದ್ಯಮಿಯ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಕೇರಳದ ಚಿನ್ನದ ಉದ್ಯಮಿಗಳಾದ ಫೈಸಲ್ ಮತ್ತು ಜಮ್ಸಿದ್ ಇಬ್ಬರು ಕೇರಳದಿಂದ ಬಂದು ತಮ್ಮ ಚಿನ್ನವನ್ನು ಮಾರಾಟ ಮಾಡಿ ₹10 ಲಕ್ಷ ತೆಗೆದುಕೊಂಡು ಹೋಗುತ್ತಿದ್ದಾಗ ದರೋಡೆ ನಡೆದಿದೆ. ಗುಂಡ್ಲುಪೇಟೆ ಕೇರಳ ಗಡಿ ಮಧ್ಯದ ಕಾಡಿನಲ್ಲಿ ನೆಟ್‌ವರ್ಕ್ ಬಂದ್ ಆದ ಬಳಿಕ ಇನ್ನೋವಾ ಕಾರಿನಲ್ಲಿ  ಉದ್ಯಮಿಗಳನ್ನು ಅಡ್ಡಗಟ್ಟಿದ ನಾಲ್ಕೈದು ಜನರ ಗುಂಪು ಮಾರಕಾಸ್ತ್ರ ತೋರಿಸಿ ಬೆದರಿಸಿ ₹10 ಲಕ್ಷ ದರೋಡೆ ಮಾಡಿ ಪರಾರಿಯಾಗಿದೆ.

ಜ.10ರಂದು ನಡೆಸಿದ್ದರೂ ದೂರುದಾರರು ಜ. 27ಕ್ಕೆ ಬಂದು ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಖಾಕಿ ಈಗ ಮದ್ದೂರು ಚೆಕ್‌ಪೋಸ್ಟ್ ಟೋಲ್ ಗೇಟ್ ಜೊತೆ ಈಗ ಮತ್ತೊಂದು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಕೇರಳದಿಂದ ಕರ್ನಾಟಕ ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.