ಬಂಧನ
(ಪ್ರಾತಿನಿಧಿಕ ಚಿತ್ರ)
ಕೊಳ್ಳೇಗಾಲ: ಇಲ್ಲಿನ ಲಾಡ್ಜ್‌ನಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 21 ಮಂದಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ನಾಗರಾಜು, ಶಿವಕುಮಾರ್, ರವಿ, ರಜಿನಿ, ರಂಗಸ್ವಾಮಿ, ಮಹೇಶ್, ದೇವರಾಜು, ನಾಗರಾಜು, ಮಹೇಶ್, ಕೆಂಪರಾಜು, ಜಗದೀಶ್, ಭಾಸ್ಕರ್, ಸಿದ್ದ, ನಿಂಗಶೆಟ್ಟಿ, ಸುರೇಶ್, ಕರಿಯಪ್ಪ ಆಚಾರ್, ರಂಗಸ್ವಾಮಿ, ನಾಗರಾಜು, ನಾಗರಾಜು, ಸುನಿಲ್ ಬಂಧಿತ ಆರೋಪಿಗಳು.
ಇವರು ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ವರ್ಷ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಪಣಕ್ಕಿಟ್ಟಿದ್ದ ₹12,270 ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.