ADVERTISEMENT

ಚಾಮರಾಜನಗರದಲ್ಲಿ ಧಾರಾಕಾರ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 4:19 IST
Last Updated 14 ಅಕ್ಟೋಬರ್ 2022, 4:19 IST
ಬಿ.ರಾಚಯ್ಯ ಜೋಡಿ ರಸ್ತೆ ನೀರಿನಿಂದ ಜಲಾವೃತವಾಗಿದೆ.
ಬಿ.ರಾಚಯ್ಯ ಜೋಡಿ ರಸ್ತೆ ನೀರಿನಿಂದ ಜಲಾವೃತವಾಗಿದೆ.   

ಚಾಮರಾಜನಗರ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರಮುಂಜಾನೆ ಧಾರಾಕಾರ ಮಳೆಯಾಗಿದೆ.

ನಗರದಲ್ಲಿ ಚರಂಡಿಗಳು ಉಕ್ಕೇರಿ, ಕೊಳಚೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟ್ ಬಳಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಜನರು ಸಂಚರಿಸಲು ಪರದಾಡಿದರು.

ಜಿಲ್ಲಾಡಳಿತ ಭವನದ ಆವರಣವೂ ಜಲಾವೃತಗೊಂಡಿದೆ.

ADVERTISEMENT

ತಡರಾತ್ರಿ 2.30ರ ಸುಮಾರಿಗೆ ಆರಂಭಗೊಂಡ ಮಳೆ ಮುಂಜಾನೆ 4 ಗಂಟೆಯ ಹೊತ್ತಿಗೆ ಬಿರುಸು ಪಡೆಯಿತು.

ತಾಲ್ಲೂಕಿನ ವೆಂಕಟಯ್ಯನಛತ್ರದಲ್ಲಿ 7.3 ಸೆಂ.ಮೀ, ಕೊತ್ತಲವಾಡಿ ಗ್ರಾಮದ ವ್ಯಾಪ್ತಿಯಲ್ಲಿ 7.25 ಸೆಂ.ಮೀ, ದೊಡ್ಡಮೋಳೆಯಲ್ಲಿ 7.15 ಸೆಂ.ಮೀ, ಕೊತ್ತಲವಾಡಿಯಲ್ಲಿ 7 ಸೆಂ.ಮೀ ಮಳೆಯಾಗಿದೆ.

ಜಿಲ್ಲಾಡಳಿತ ಭವನದ ಆವರಣ ನೀರಿನಿಂದ ಜಲಾವೃತವಾಗಿರುವ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.