ADVERTISEMENT

ಗುಂಡ್ಲುಪೇಟೆ| ರಗ್ಬೀ ಲೀಗ್: ಬೇಗೂರಿನ ಲಿಟಲ್ ಫ್ಲವರ್ ಶಾಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:23 IST
Last Updated 13 ಅಕ್ಟೋಬರ್ 2025, 2:23 IST
ಗುಂಡ್ಲುಪೇಟೆ ಪಟ್ಟಣದ ಕ್ರೈಸ್ಟ್ ಶಾಲೆಯಲ್ಲಿ ಆಯೋಜಿಸಿದ್ದ ಖೇಲೋ ಇಂಡಿಯಾ ಅಸ್ಮಿತ್ ವುಮನ್ ರಗ್ಬೀ ಲೀಗ್‌ನಲ್ಲಿ ಬಹುಮಾನ ಪಡೆದವರು
ಗುಂಡ್ಲುಪೇಟೆ ಪಟ್ಟಣದ ಕ್ರೈಸ್ಟ್ ಶಾಲೆಯಲ್ಲಿ ಆಯೋಜಿಸಿದ್ದ ಖೇಲೋ ಇಂಡಿಯಾ ಅಸ್ಮಿತ್ ವುಮನ್ ರಗ್ಬೀ ಲೀಗ್‌ನಲ್ಲಿ ಬಹುಮಾನ ಪಡೆದವರು   

ಗುಂಡ್ಲುಪೇಟೆ: ಪಟ್ಟಣದ ಕ್ರೈಸ್ಟ್ ಶಾಲೆಯಲ್ಲಿ ರಗ್ಬೀ ಇಂಡಿಯಾ, ರಗ್ಬೀ ಕರ್ನಾಟಕ, ಜಿಲ್ಲಾ ರಗ್ಬೀ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಖೇಲೋ ಇಂಡಿಯಾ ಅಸ್ಮಿತ್ ವುಮನ್ ರಗ್ಬೀ ಲೀಗ್ 2025 ಆಯೋಜಿಸಲಾಗಿತ್ತು.

ಈ ಪಂದ್ಯಾವಳಿಯಲ್ಲಿ ಬೇಗೂರಿನ ಲಿಟಲ್ ಫ್ಲವರ್ ಶಾಲೆ ಪ್ರಥಮ ಸ್ಥಾನ, ಹೊರೆಯಾಲ ಜೆಎಸ್‌ಎಸ್ ಫ್ರೌಢಶಾಲೆ ದ್ವಿತೀಯ ಹಾಗೂ ಗುಂಡ್ಲುಪೇಟೆ ಯಂಗ್ ಸ್ಕಾಲರ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿವೆ.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಗೋಪಾಲ್ ಹೊರೆಯಾಲ, ರಗ್ಬೀ ಅಧಿಕಾರಿ ಜಾನ್ ಐಸಾಕ್, ಫಾಧರ್ ರಿಜೀಶ್ ಪುತಿಯಾಪರಂಬಿಲ್, ಪದಾಧಿಕಾರಿಗಳಾದ ದೊಡ್ಡಪ್ಪಾಜಿ, ನಾಗೇಂದ್ರ, ಭರತ್, ಚಿಕ್ಕನಾಯಕ, ಆಲಿಯಾ, ದೀಪ್ತಿ, ಇಂಚರ, ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡಾಪಟುಗಳು, ಫೋಷಕರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.