ಬಂಧನ
(ಪ್ರಾತಿನಿಧಿಕ ಚಿತ್ರ)
ಗುಂಡ್ಲುಪೇಟೆ: ‘ಯುವತಿ ಕಾಣೆಯಾಗಿದ್ದ ವಿಷಯದಲ್ಲಿ ಪೊಲೀಸ್ ಠಾಣೆಗೆ ಪ್ರತಿದೂರು ನೀಡಲು ಬಂದಿದ್ದ ಯುವಕನಿಗೆ ಶನಿವಾರ ರಾತ್ರಿ ಚಾಕುವಿನಿಂದ ದಾಳಿ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪಟ್ಟಣದ ಪೌರ ಕಾರ್ಮಿಕರ ಕಾಲೊನಿಯ ಅರ್ಮುಗಂ (22) ಗಾಯಾಳು. ಜಾಕೀರ್ ಶರೀಫ್ ಚಾಕು ಇರಿದ ಆರೋಪಿ. ಜಕೀರ್ ಶರೀಫ್ ಹಾಗೂ ಮಹದೇವಪ್ರಸಾದ್ ಎಂಬುವರ ವಿರುದ್ಧ ಜಾತಿನಿಂದನೆ, ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಅರ್ಮುಗಂ ಸಂಬಂಧಿ ಮಹೇಂದ್ರ ಎಂಬಾತ ನಮ್ಮ ಯುವಕ ಕಾಣೆಯಾಗಿದ್ದಾನೆ ಎಂದು ಪಟ್ಟಣದ ಠಾಣೆಗೆ ಪ್ರತಿದೂರು ಸಲ್ಲಿಸಲು ಬಂದಿದ್ದ ವೇಳೆ ಘಟನೆ ನಡೆದಿದೆ. ಗಾಯಾಳು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವತಿ ಅ.1 ರಿಂದ ಕಾಣೆಯಾಗಿದ್ದರು. ಕಾಣೆಯಾಗಿದ್ದ ಯುವತಿಯನ್ನು ಮಹೇಂದ್ರ ಎಂಬಾತ ಕರೆದೊಯ್ದಿದ್ದಾನೆ ಎಂಬ ಸಂಶಯದಿಂದ ಯುವತಿಯ ಸಹೋದರ ಜಾಕೀರ್ ಶರೀಫ್ ಮಹೇಂದ್ರನ ತಾಯಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ್ದರು ಎಂದು ದೂರಲಾಗಿದೆ. ಹೀಗಾಗಿ, ‘ ತನ್ನ ಮಗನೂ ಕಾಣೆಯಾಗಿದ್ದಾನೆ’ ಎಂದು ಪ್ರತಿದೂರು ಸಲ್ಲಿಸಲು ಬಂದಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಯುವತಿಯನ್ನು ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.