ADVERTISEMENT

ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಸೋಮವಾರ ಭರ್ಜರಿ ಮಳೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:12 IST
Last Updated 2 ಸೆಪ್ಟೆಂಬರ್ 2025, 2:12 IST
ಮಳೆಯಿಂದಾಗಿ ಕೊಳ್ಳೇಗಾಲದ ಡಾ. ರಾಜಕುಮಾರ್ ರಸ್ತೆ ಜಲಾವೃತವಾಯಿತು
ಮಳೆಯಿಂದಾಗಿ ಕೊಳ್ಳೇಗಾಲದ ಡಾ. ರಾಜಕುಮಾರ್ ರಸ್ತೆ ಜಲಾವೃತವಾಯಿತು   

ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಸೋಮವಾರ ಭರ್ಜರಿ ಮಳೆಯಾಗಿದೆ. ಮಧ್ಯಾಹ್ನ 3.20ಕ್ಕೆ ಆರಂಭವಾದ ಮಳೆ ಸಂಜೆ 6 ಗಂಟೆಯವರೆಗೂ ಎಡೆಬಿಡದೆ ನಿರಂತರವಾಗಿ ಸುರಿಯಿತು.

ಮಳೆಯಿಂದ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಹತ್ತು ದಿನಗಳಿಂದಲೂ ಸಹ ಭತ್ತದ ನಾಟಿ ಸೇರಿದಂತೆ ವಿವಿಧ ಬೆಳೆಗಳ ನಾಟಿ–ಬಿತ್ತನೆ ಕೆಲಸವನ್ನು ಆರಂಭ ಮಾಡಿದ್ದಾರೆ. ಹಾಗಾಗಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಸರಿಯಾಗಿ ಮಳೆ ಆಗಿರಲಿಲ್ಲ. ಈಗ ಭರ್ಜರಿ ಮಳೆಗೆ ಹಳ್ಳಕೊಳ್ಳಗಳು ಕೆರೆಕಟ್ಟೆಗಳು ತುಂಬಿವೆ.

ಶಾಲಾ ಮಕ್ಕಳ ಪರದಾಟ:

ADVERTISEMENT

ಮಳೆ ಹೆಚ್ಚಾದ ಕಾರಣ ಶಾಲಾ ಮಕ್ಕಳು ಮನೆಗೆ ಹೋಗಲು ತಡವಾಯಿತು. ಶಾಲೆಯ ಮುಖ್ಯ ಶಿಕ್ಷಕರು ಪೋಷಕರನ್ನು ಕರೆಸಿ ಮಕ್ಕಳನ್ನು ಮನೆಗೆ ಕಳುಹಿಸಿದರು. ನಗರದ ಡಾ.ರಾಜಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಜಲಾವೃತವಾದವು. ಮಳೆ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು. ಶಾಲಾ ಮಕ್ಕಳು ಮಳೆಯಲ್ಲೇ ನೆನೆದು ಮನೆಗೆ ಹೋಗುವ ಪರಿಸ್ಥಿತಿ ಉಂಟಾಯಿತು. ತಾಲ್ಲೂಕಿನ ವಿವಿಧೆಡೆಯೂ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.