
ಸಾವು
(ಪ್ರಾತಿನಿಧಿಕ ಚಿತ್ರ)
ಕೊಳ್ಳೇಗಾಲ: ಇಲ್ಲಿನ ಬಸ್ ನಿಲ್ದಾಣದಲ್ಲಿ ವಿಪರೀತ ಮದ್ಯ ಸೇವನೆ ಮಾಡಿದ ವ್ಯಕ್ತಿ ಬೆಂಗಳೂರು ಕುಂಬಳಗೂಡು ಮೂಲದ ನಿವಾಸಿ ಗಂಗಾಧರಪ್ಪ (55) ಸೋಮವಾರ ಮೃತಪಟ್ಟಿದ್ದಾರೆ.
ಈತ ಕಳೆದ 20 ವರ್ಷಗಳ ಹಿಂದೆ ಕುಟುಂಬದಿಂದ ದೂರವಾಗಿದ್ದನು. ಕಳೆದ ಐದಾರು ವರ್ಷಗಳ ಹಿಂದೆ ಕೊಳ್ಳೇಗಾಲಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಐದು ತಿಂಗಳಿಂದ ಬಸ್ ನಿಲ್ದಾಣದ ಸಾರಿಕಾ ಹೋಟೆಲ್‌ನಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಭಾನುವಾರ ಊರಿಗೆ ಹೋಗುವುದಾಗಿ ಹೇಳಿ ಹಣ ಪಡೆದು ವಿಪರೀತವಾಗಿ ಕುಡಿದು ಬಸ್ ನಿಲ್ದಾಣದೊಳಗೆ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಮಹಜರ್ ನಡೆಸಿ, ವಾರಸುದಾರರನ್ನು ಪತ್ತೆ ಮಾಡಿ ಮೃತನ ಮಗ ರವಿಕಿರಣ್ ಅವರಿಂದ ದೂರು ಪಡೆದಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು. ಮೃತದೇಹವನ್ನು ದಾಸನಪುರ ಸಶ್ಮಾನದಲ್ಲಿ ಮೃತನ ಕುಟುಂಬದವರು ಅಂತ್ಯಸಂಸ್ಕಾರ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.