ADVERTISEMENT

ಬಾಲಕಿ ಅತ್ಯಾಚಾರಕ್ಕೆ ಯತ್ನ; ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 14:43 IST
Last Updated 2 ಜನವರಿ 2021, 14:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಳ್ಳೇಗಾಲ: ಹದಿಮೂರು ವರ್ಷದ ಬಾಲಕಿ ಮೇಲೆಅತ್ಯಾಚ್ಯಾರಕ್ಕೆ ಯತ್ನಿಸಿರುವ ವ್ಯಕ್ತಿಯೊಬ್ಬರು ಆಕೆಯ ಕುಟುಂಬಸ್ಥರ ಮೇಲೆ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿರುವ ಪ್ರಕರಣ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಪೊಲೀಸರು ಆರೋಪಿ ವಿರುದ್ಧ ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ‌‌ನಗರದವರೇ ಆದ ಶಿವಕುಮಾರ್‌ ಆರೋಪಿ.

ಬಾಲಕಿಯು ಶುಕ್ರವಾರ ರಾತ್ರಿ ಬಹಿರ್ದೆಸೆಗಾಗಿ ಮನೆಯ ಹಿಂಬದಿಗೆ ಬಂದಿದ್ದಾಗ, ಆ ಸ್ಥಳದಲ್ಲಿದ್ದ ಆರೋಪಿ ಆಕೆಯ ಕೈಯನ್ನು ಹಿಡಿದು ಎಳೆದಾಡಿದ್ದಾರೆ. ಬಾಲಕಿ ಕೂಗಿಕೊಂಡಾಗ ಕುಟಂಬದವರು ಹೊರಗಡೆ ಬಂದಿದ್ದಾರೆ. ಬಾಲಕಿ ನಡೆದ ಘಟನೆಗಳನ್ನು ವಿವರಿಸಿದ್ದಾಳೆ.

ADVERTISEMENT

ನಡೆದ ಘಟನೆಯನ್ನು ತಿಳಿಸಿದರೆ ಕೊಲೆ ಮಾಡುವುದಾಗಿ ಶಿವಕುಮಾರ್‌ ಬೆದರಿಕೆ ಒಡ್ಡಿದ್ದಾರೆ ಎಂದು ಬಾಲಕಿ ಪೋಷಕರು ನಗರ ಠಾಣೆಗೆ ದೂರು ನೀಡಿದ್ದಾರೆ.

ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.