ಕೊಳ್ಳೇಗಾಲ: ನಗರದಲ್ಲಿ ಬೀದಿ ದನಗಳು, ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಸಮಿತಿ ಅಧ್ಯಕ್ಷೆ ದೇವಿಕಾ ಅವರು ನಗರ ಸಭೆ ಉಪಾಧ್ಯಕ್ಷ ಎ.ಪಿ ಶಂಕರ್ ಹಾಗೂ ಆರೋಗ್ಯ ನಿರೀಕ್ಷಕ ಚೇತನ್ ಅವರಿಗೆ ಶುಕ್ರವಾರ ಮನವಿ ಪತ್ರವನ್ನು ಸಲ್ಲಿಸಿದರು.
ನಗರಸಭೆ ಕಚೇರಿಗೆ ಆಗಮಿಸಿದ 20ಕ್ಕೂ ಹೆಚ್ಚು ಪದಾಧಿಕಾರಿಗಳು ಸಂಘಟನೆ ಪರವಾಗಿ ಘೋಷಣೆ ಕೂಗಿ, ಉಪಾಧ್ಯಕ್ಷರ ಕೊಠಡಿಗೆ ಬಂದು ಮನವಿ ಸಲ್ಲಿಸಿದರು.
ದೇವಿಕಾ ಮಾತನಾಡಿ, ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಬಡಾವಣೆಗಳಲ್ಲಿ ಬೀದಿ ನಾಯಿಗಳ ಗುಂಪು ಅಲೆದಾಟ ಹೆಚ್ಚಿದೆ. ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ವಾರದ ಹಿಂದೆ ಬೀದಿ ನಾಯಿಗಳು ಬೈಕ್ ಸವಾರರನ್ನು ಅಟ್ಟಿಸಿಕೊಂಡು ಹೋಗಿದ್ವು, ಸವಾರರರು ಬಿದ್ದು ತೀವ್ರಗಾಯಗೊಂಡಿದ್ದರು. ಇವುಗಳು ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿವೆ ಎಂದರು.
ಬೀದಿ ದನಗಳ ಹಾವಳಿಯಿಂದ ವಾಹನ ದಟ್ಟಣೆ, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿವೆ. ಅನೇಕ ಅಪಘಾತಗಳು ಸಹ ಸಂಭವಿಸಿವೆ. ತರಕಾರಿ, ಸೊಪ್ಪುಗಳನ್ನು ಬಿಡಾಡಿ ದನಗಳು ಜನರಿಂದ ಕಿತ್ತು ತಿನ್ನುತ್ತಿವೆ. ವ್ಯಾಪಾರಿಗಳಿಗೂ ಜನರಿಗೆ ತೊಂದರೆ ನೀಡುತ್ತಿವೆ. ಇವುಗಳನ್ನು ಹಿಡಿದು ಪಿಂಜರ್ ಪೋಲ್‌ಗೆ ರವಾನಿಸಬೇಕು. ಅವುಗಳ ಮಾಲೀಕರಿಗೆ ದಂಡ ವಿಧಿಸಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ. ಒಂದು ವಾರದ ಒಳಗೆ ನಮ್ಮ ಕ್ರಮ ಕೈಗೊಳ್ಳದಿದ್ದರೆ ತೀವ್ರಾಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಪ್ರಭುಸ್ವಾಮಿ, ಸಿದ್ದರಾಜು ನಾಯಕ, ಮಹಾದೇವ, ಜಯಮ್ಮ ನಾಗರಾಜು, 20ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.