ADVERTISEMENT

ಗುಡ್ಡಕುಸಿತ: ತಮಿಳುನಾಡು ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 14:23 IST
Last Updated 16 ಅಕ್ಟೋಬರ್ 2022, 14:23 IST
ಹನೂರು ತಾಲ್ಲೂಕಿನ ಗರಿಕೆಕಂಡಿ ಹಾಗೂ ತಮಿಳುನಾಡಿನ ಹಂದಿಯೂರು ನಡುವಿನ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ
ಹನೂರು ತಾಲ್ಲೂಕಿನ ಗರಿಕೆಕಂಡಿ ಹಾಗೂ ತಮಿಳುನಾಡಿನ ಹಂದಿಯೂರು ನಡುವಿನ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ   

ಹನೂರು (ಚಾಮರಾಜನಗರ): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಗರಿಕೆಕಂಡಿಯಿಂದ ತಮಿಳುನಾಡಿನ ಹಂದಿಯೂರು ನಡುವೆ ವಿವಿಧ ಕಡೆ ಗುಡ್ಡ ಕುಸಿತವಾಗಿದ್ದು, ಗರಿಕೆಕಂಡಿ ಚೆಕ್ ಪೋಸ್ಟ್‌ನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ‌ ಭಾನುವಾರದಿಂದ ನಾಲ್ಕು ದಿನಗಳ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಗುಡ್ಡ ಕುಸಿತದಿಂದ ಭಾರಿ ಪ್ರಮಾಣದಲ್ಲಿ ಮಣ್ಣು, ಗಿಡ ಮರಗಳು ರಸ್ತೆಯ ಮಧ್ಯದಲ್ಲಿ ಬಿದ್ದಿವೆ.ಸ್ಥಳಕ್ಕೆ ತಮಿಳುನಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ಹಾಗು ಮರಗಿಡಗಳು ಬಿದ್ದಿರುವುದರಿಂದ ಅದನ್ನು ತೆರವುಗೊಳಿಸಲು ಸಮಯಬೇಕು. ಹಾಗಾಗಿ, ಕರ್ನಾಟಕದಿಂದ ಯಾವುದೇ ವಾಹನವನ್ನು ತಮಿಳುನಾಡಿಗೆ ಬಿಡದಂತೆ ಅಲ್ಲಿನ ಪೊಲೀಸರು ಮನವಿ ಮಾಡಿದ್ದಾರೆ.

ADVERTISEMENT

ನಾಲ್ಕು ದಿನಗಳ ಕಾಲ ಸಂಚಾರ ನಿರ್ಬಂಧಿಸಲಾಗಿದ್ದು, ಚೆಕ್‌ಪೋಸ್ಟ್‌ ಬಂದ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.