ADVERTISEMENT

ಚಾಮರಾಜನಗರ: ಶ್ರಾವಣ ಮಾಸದ ಪರಿಣಾಮ ಹೂವು ತುಟ್ಟಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 16:28 IST
Last Updated 16 ಆಗಸ್ಟ್ 2021, 16:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಶ್ರಾವಣ ಮಾಸದಲ್ಲಿ ಶುಭಸಮಾರಂಭಗಳು ಆರಂಭವಾಗುತ್ತಲೇ ಮತ್ತು ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿರುವಂತೆಯೇ ಮಾರುಕಟ್ಟೆಯಲ್ಲಿ ಹೂವುಗಳಿಗೆ ಬೇಡಿಕೆ ಬಂದಿದ್ದು, ಬೆಲೆ ಹೆಚ್ಚಾಗಿದೆ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರಕ್ಕೆ ಕೆಜಿಗೆ ₹1,000,ಮರ್ಲೆ ₹320, ಸೇವಂತಿಗೆಗೆ ₹160,ಸುಂಗಧರಾಜಕ್ಕೆ ₹120 ಹಾಗೂ ಚೆಂಡು ₹30ರಿಂದ ₹60ರವೆರೆಗೆ ಇದೆ.

‘ಶ್ರಾವಣ ಮಾಸದಲ್ಲಿ ಶುಭ ಸಮಾರಂಭಗಳು ಹೆಚ್ಚು. ವರ ಮಹಾಲಕ್ಷ್ಮಿ ಹಬ್ಬ ಕೂಡ ಹತ್ತಿರದಲ್ಲೇ ಇದೆ. ಮಳೆ ವಾತಾವರಣ ಇರುವುದರಿಂದ ಕಡಿಮೆ ಪ್ರಮಾಣದಲ್ಲಿ ಹೂವು ಬರುತ್ತಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ಚೆನ್ನೀಪುರದ ಮೋಳೆಯ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತರಕಾರಿಗಳ ಪೈಕಿ ಟೊಮೆಟೊ ಬೆಲೆ ಮತ್ತೆ ₹5 ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹20 ಇದೆ. ಕ್ಯಾರೆಟ್‌ ಬೆಲೆ ಕೆಜಿಗೆ ₹10 ಹೆಚ್ಚಾಗಿದೆ. ಕಳೆದ ವಾರ ₹30 ಇತ್ತು. ಸೋಮವಾರ ₹40 ಆಗಿದೆ.ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಪೈಕಿ ಕಿತ್ತಳೆಯಲ್ಲಿ ಎರಡು ತಳಿ ಲಭ್ಯವಿದ್ದು, ಒಂದರ ಬೆಲೆ ₹80 ಇದ್ದರೆ, ಇನ್ನೊಂದರದ್ದು ₹120 ಇದೆ. ದಾಳಿಂಬೆ ಬೆಲೆಯಲ್ಲಿ ಕೊಂಚ ಹೆಚ್ಚಳ ಕಂಡು ಬಂದಿದ್ದು, ₹100ರಿಂದ ₹120ರವರೆಗೂ ಬೆಲೆ ಇದೆ. ಉಳಿದ ಹಣ್ಣುಗಳ ಬೆಲೆ ಸ್ಥಿರವಾಗಿದೆ.

ಮಾಂಸದ ಮಾರುಕಟ್ಟೆಯಲ್ಲಿ ಮಾಂಸಗಳ ಧಾರಣೆ ಸ್ಥಿರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.