ಹುಲಿ – ಸಂಗ್ರಹ ಚಿತ್ರ
ಚಾಮರಾಜನಗರ: ‘ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸುವ ಸಿಇಸಿ ಶಿಫಾರಸಿಗೆ ಸಹಮತ ಇಲ್ಲ’ ಎಂದು ಹನೂರು ಶಾಸಕ ಮಂಜುನಾಥ್ ಅಭಿಪ್ರಾಯಪಟ್ಟರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವುದಕ್ಕೆ ಅರಣ್ಯದಂಚಿನ ಗ್ರಾಮಸ್ಥರ ಹಾಗೂ ರೈತರ ವಿರೋಧವಿದೆ. ಕಾನೂನುಗಳ ಹೆಸರಿನಲ್ಲಿ ಅರಣ್ಯದೊಳಗೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗುತ್ತದೆ ಎಂಬ ಭಯ ಕಾಡುತ್ತಿದೆ’ ಎಂದರು.
‘ವಿರೋಧಗಳ ಮಧ್ಯೆಯೂ ಘೋಷಣೆ ಮಾಡಿದರೆ ಹುಲಿಗಳ ಅಸಹಜ ಸಾವಿನ ಪ್ರಕರಣಗಳು ಮರುಕಳಿಸುವ ಆತಂಕ ಎದುರಾಗಲಿದೆ. ಹಾಗಾಗಿ, ಸಿಇಸಿ ಸಲ್ಲಿಸಿರುವ ಪ್ರಸ್ತಾವ ಕೈಬಿಡಬೇಕು’ ಎಂದು ಒತ್ತಾಯಿಸಿದರು.
‘ಈಗಾಗಲೇ ಜಿಲ್ಲೆಯಲ್ಲಿ ಬಂಡೀಪುರ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯಗಳಿವೆ. ಅರಣ್ಯ ಹಾಗೂ ವನ್ಯಪ್ರಾಣಿಗಳ ರಕ್ಷಣೆಗೆ ಯಾರ ವಿರೋಧವೂ ಇಲ್ಲ. ಕಾಯ್ದೆ ಕಾನೂನುಗಳ ಹೆಸರಿನಲ್ಲಿ ಸಮಸ್ಯೆಯಾಗಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.