ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿದಿದೆ. 1,595 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,461 ಮಂದಿಯ ವರದಿ ನೆಗಟಿವ್ ಬಂದು, 134 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.
ಆಸ್ಪತ್ರೆಯಲ್ಲಿದ್ದವರು ಆರು ಮಂದಿ, ಕೋವಿಡ್ ಕೇರ್ ಕೇಂದ್ರದಲ್ಲಿದ್ದ 168 ಮಂದಿ ಹಾಗೂ ಹೋಂ ಐಸೊಲೇಷನ್‌ನಲ್ಲಿದ್ದ 20 ಮಂದಿ ಸೇರಿದಂತೆ 194 ಮಂದಿ ಗುಣಮುಖರಾಗಿದ್ದಾರೆ.
24 ಗಂಟೆಗಳ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರೂ ಕೋವಿಡ್‌ಯೇತರ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯು ವರದಿಯಲ್ಲಿ ತಿಳಿಸಿದೆ.
ಕೋವಿಡ್ ಪ್ರಕರಣಗಳು ಇಳಿಮುಖವಾಗಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿ ದಿನ ಇಳಿಯುತ್ತಿದೆ. ಸದ್ಯ ಜಿಲ್ಲೆಯಲ್ಲಿ 1,269 ಮಂದಿ ಸೋಂಕಿತರಿದ್ದಾರೆ. ಈ ಪೈಕಿ 48 ಮಂದಿ ಐಸಿಯುನಲ್ಲಿದ್ದು, 47 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್ ಕೇರ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿದ್ದಾರೆ.
ಸೋಮವಾರ ದೃಢಪಟ್ಟ 134 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 42, ಗುಂಡ್ಲುಪೇಟೆಯ 51, ಕೊಳ್ಳೇಗಾಲದ 23, ಹನೂರು ತಾಲ್ಲೂಕಿನ 12, ಯಳಂದೂರು ತಾಲ್ಲೂಕಿನ 4 ಹಾಗೂ ಹೊರ ಜಿಲ್ಲೆಯ ಎರಡು ಪ್ರಕರಣಗಳು ಸೇರಿವೆ.
ಗುಣಮುಖರಾದ 194 ಮಂದಿಯಲ್ಲಿಚಾಮರಾಜನಗರ ತಾಲ್ಲೂಕಿನ 66, ಗುಂಡ್ಲುಪೇಟೆಯ 38, ಕೊಳ್ಳೇಗಾಲದ 39, ಹನೂರಿನ 36, ಯಳಂದೂರಿನ 12 ಹಾಗೂ ಹೊರ ಜಿಲ್ಲೆಯ ಮೂವರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.