ADVERTISEMENT

‘ಪಾರ್ಕಿಂಗ್‌ನಲ್ಲಿ ಹೆಚ್ಚುವರಿ ಹಣ ವಸೂಲಿ’: ನಗರ ಸಭೆ ಅಧ್ಯಕ್ಷೆ ರೇಖಾ ತರಾಟೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:11 IST
Last Updated 20 ಆಗಸ್ಟ್ 2025, 2:11 IST
ಕೊಳ್ಳೇಗಾಲದ ಬಸ್ ನಿಲ್ದಾಣದ ನೆಲಮಹಡಿಯ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಗರಸಭೆ ಅಧ್ಯಕ್ಷೆ ರೇಖಾ ಹಾಗೂ ಅಧಿಕಾರಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು 
ಕೊಳ್ಳೇಗಾಲದ ಬಸ್ ನಿಲ್ದಾಣದ ನೆಲಮಹಡಿಯ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಗರಸಭೆ ಅಧ್ಯಕ್ಷೆ ರೇಖಾ ಹಾಗೂ ಅಧಿಕಾರಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು    

ಕೊಳ್ಳೇಗಾಲ: ಇಲ್ಲಿನ ಬಸ್ ನಿಲ್ದಾಣದ ನೆಲಮಹಡಿಯ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಗರ ಸಭೆ ಅಧ್ಯಕ್ಷೆ ರೇಖಾ ಹಾಗೂ ಅಧಿಕಾರಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು.

ಮಂಗಳವಾರ ಭೇಟಿ ನೀಡಿದ ಅಧ್ಯಕ್ಷರು ಹಾಗೂ ಅಧಿಕಾರಿಗಳು ಪಾರ್ಕಿಂಗ್ ಟೆಂಡರ್ ದಾರ ರವಿ ಅವರಿಗೆ ತರಾಟೆ ತೆಗೆದುಕೊಂಡರು.

ನಗರಸಭೆ ಅಧ್ಯಕ್ಷೆ ರೇಖಾ ಮಾತನಾಡಿ, ಬೈಕ್ ಪಾರ್ಕಿಂಗ್ ಹಾಗೂ ಕಾರ್ ಪಾರ್ಕಿಂಗ್ ಮಾಡುವವರ ಮೇಲೆ ಹೆಚ್ಚು ಹಣ ವಸೂಲಾತಿ ಮಾಡುತ್ತಿದ್ದೀರಿ ಎಂಬ ಆರೋಪ ಕೇಳಿ ಬಂದಿದೆ ಹಾಗಾಗಿ ನಾವು ವೀಕ್ಷಣೆ ಮಾಡಲು ಬಂದಿದ್ದೀವಿ ಹೆಲ್ಮೆಟ್‌ಗೆ ₹10 ಸಹ ವಸೂಲಿ ಮಾಡುತ್ತಿದ್ದೀರಿ, ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಪಾರ್ಕಿಂಗ್‌ನಲ್ಲಿ ಮೂಲಸೌಕರ್ಯಗಳು ಇಲ್ಲ. ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ಬೆಂಕಿ ನಂದಿಸುವ ಸಿಲಿಂಡರ್ ನಿಮ್ಮ ಬಳಿ ಇಲ್ಲ. ಯಾವ ಕೆಲಸವನ್ನು ಮಾಡುತ್ತಿದ್ದೀರಿ. ಇನ್ನು ಒಂದು ವಾರದ ಒಳಗೆ ನೀವು ಎಲ್ಲ ರೀತಿಯ ಸಲಕರಣೆಗಳನ್ನು ಇಟ್ಟುಕೊಳ್ಳಬೇಕು. ‌ಇನ್ನು ಮೇಲೆ ಹೆಚ್ಚುವರಿ ಹಣ ವಸೂಡಿ ಮಾಡುವುದು ಬೇಡ. ಒಂದು ವೇಳೆ ಮಾಡಿದರೆ ನಿಮ್ಮ ಟೆಂಡರ್ ನನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ನಗರಸಭೆ ಅಧಿಕಾರಿಗಳಾದ ರಾಘವೇಂದ್ರ, ನಿಂಗರಾಜು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.