ADVERTISEMENT

ಕೊಳ್ಳೇಗಾಲದಲ್ಲಿ ದಿಢೀರ್‌ ಮಳೆ, ತಂ‌ಪಾದ ಇಳೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 11:06 IST
Last Updated 12 ಏಪ್ರಿಲ್ 2021, 11:06 IST
ಮಳೆಯಿಂದಾಗಿ ಕೊಳ್ಳೇಗಾಲದ ಬ್ರದರನ್‌ ಚರ್ಚ್‌ ವೃತ್ತದಲ್ಲಿ ನೀರು ನಿಂತಿರುವುದು
ಮಳೆಯಿಂದಾಗಿ ಕೊಳ್ಳೇಗಾಲದ ಬ್ರದರನ್‌ ಚರ್ಚ್‌ ವೃತ್ತದಲ್ಲಿ ನೀರು ನಿಂತಿರುವುದು   

ಕೊಳ್ಳೇಗಾಲ: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿಸೋಮವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ.

ಮಧ್ಯಾಹ್ನ ಇದ್ದಕ್ಕಿದಂತೆ ಮೋಡಕವಿದ ವಾತಾವರಣ ಸೃಷ್ಟಿಯಾಯಿತು. 2.20ರ ಸಮಯದಲ್ಲಿ ಜೋರು ಗಾಳಿ ಬೀಸಿ ಮಳೆ ಸುರಿಯಲು ಆರಂಭಿಸಿತು. 20 ನಿಮಿಷಕ್ಕೂ ಹೆಚ್ಚು ಕಾಲ ವರ್ಷಧಾರೆಯಾಗಿದ್ದು, ವಾತಾವರಣ ತಂಪಾಯಿತು.

ಮಳೆಯಿಂದ ನಗರದ ಬ್ರದರನ್ ಚರ್ಚ್ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಜನರು ಕಿರಿಕಿರಿ ಅನುಭವಿಸಿದರು.

ADVERTISEMENT

ತಾಲ್ಲೂಕಿನ ಜಾಗೇರಿ, ಹ್ಯಾಂಡ್‍ಪೋಸ್ಟ್, ಸತ್ತೇಗಾಲ, ಧನಗೆರೆ, ನರೀಪುರ, ಸರಗೂರು, ಜಿನಕನಹಳ್ಳಿ, ಮತ್ತಿಪುರ, ಗುಂಡೇಗಾಲ, ಪಾಳ್ಯ, ಕರಿಯನಪುರ, ಉತ್ತಂಬಳ್ಳಿ, ಕೆಂಪನಪಾಳ್ಯ, ತಿಮ್ಮರಾಜೀಪುರ, ಜಕ್ಕಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಮಳೆಯಾಗಿದೆ.

ಚಾಮರಾಜನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.