ADVERTISEMENT

ಯಳಂದೂರು: ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಆನೆಯನ್ನು ಬೆನ್ನಟ್ಟಿದ ಸೀಳು ನಾಯಿಗಳು

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:31 IST
Last Updated 16 ಜುಲೈ 2020, 16:31 IST
ಆನೆಯನ್ನು ಸುತ್ತುವರಿದಿರುವ ಸೀಳುನಾಯಿಗಳು (ವಿಡಿಯೊ ಚಿತ್ರ)
ಆನೆಯನ್ನು ಸುತ್ತುವರಿದಿರುವ ಸೀಳುನಾಯಿಗಳು (ವಿಡಿಯೊ ಚಿತ್ರ)   

ಯಳಂದೂರು:ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣಾನೆಯೊಂದನ್ನು ಸೀಳು ನಾಯಿಗಳ (ಕೆನ್ನಾಯಿಗಳು) ಗುಂಪು ಅಟ್ಟಾಡಿಸಿದ ಪ್ರಸಂಗವೊಂದು ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮಂಗಳವಾರ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೊ ತುಣುಕು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಹೆಣ್ಣಾನೆಯೊಂದರ ಮೇಲೆ ದಾಳಿ ನಡೆಸಲು ಕೆನ್ನಾಯಿಗಳು ಯತ್ನಿಸುತ್ತಿರುವ ಹಾಗೂ ಆನೆ ಘೀಳಿಡುತ್ತಾ ಸೊಂಡಿಲು ಬೀಸಿ, ಕಾಲಿನಿಂದ ಒದೆಯುತ್ತಾ ಕೆನ್ನಾಯಿಗಳನ್ನು ಓಡಿಸುವ ದೃಶ್ಯವೂ ವಿಡಿಯೊದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.