ADVERTISEMENT

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ‘ಮಾಸ್ಕ್‌ ಬ್ಯಾಂಕ್‌’ ನೆರವು

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಸ್ವಯಂ ಸೇವಕರಿಂದ ಮುಖಗವಸು ಸೇವೆ

ನಾ.ಮಂಜುನಾಥ ಸ್ವಾಮಿ
Published 24 ಮೇ 2020, 15:44 IST
Last Updated 24 ಮೇ 2020, 15:44 IST
ಯಳಂದೂರು ತಾಲ್ಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಮಾಸ್ಕ್‌ ಸಿದ್ಧಪಡಿಸುತ್ತಿರುವ ರೋವರ್‌ ಸ್ಕೌಟ್‌ ಲೀಡರ್‌ ಎಸ್‌.ಪ್ರತಾಪ್ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ವಯಂ ಸೇವಕರು
ಯಳಂದೂರು ತಾಲ್ಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಮಾಸ್ಕ್‌ ಸಿದ್ಧಪಡಿಸುತ್ತಿರುವ ರೋವರ್‌ ಸ್ಕೌಟ್‌ ಲೀಡರ್‌ ಎಸ್‌.ಪ್ರತಾಪ್ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ವಯಂ ಸೇವಕರು   

ಯಳಂದೂರು:ಜೂನ್‌ ಮಾಸಾಂತ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮುಖಗವಸು (ಮಾಸ್ಕ್)‌ವಿತರಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಆಯಾ ತಾಲ್ಲೂಕಿನಲ್ಲಿಸಕ್ರಿಯವಾಗಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಸ್ವಯಂ ಸೇವಕರು ಮಾಸ್ಕ್‌ ಸಿದ್ಧಪಡಿಸುತ್ತಿದ್ದಾರೆ. ಇದಕ್ಕೆ ಅಗತ್ಯ ಇರುವ ಪರಿಕರಗಳನ್ನು ದಾನಿಗಳ ಮೂಲಕ ಸಂಗ್ರಹಮಾಡಲಾಗುತ್ತಿದೆ.

2020–21ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ‘ಮಾಸ್ಕ್‌ ಬ್ಯಾಂಕ್’ ಮೂಲಕ ನೆರವು ದೊರೆಯಲಿದೆ.

ಕೋವಿಡ್‌–19 ನಿಯಂತ್ರಿಸಲು ಸರ್ಕಾರ ಮಾಸ್ಕ್‌ ಧರಿಸುವುದನ್ನುಕಡ್ಡಾಯ ಮಾಡಿದೆ. ಶೈಕ್ಷಣಿಕ ವಲಯಗಳಲ್ಲಿ ಬಿಆರ್‌ಸಿ, ಬಿಇಒ,ಸಿಆರ್‌ಪಿಗಳು ದಾನಿಗಳ ಸಹಾಯದಿಂದ ಮುಖಗವಸು ತಯಾರಿಸಿ ಜಿಲ್ಲಾ ಕೇಂದ್ರಕ್ಕೆ ರವಾನಿಸಲಿದ್ದಾರೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ನ ತರಬೇತಿಪಡೆದ ಸದಸ್ಯರು ಮಾಸ್ಕ್‌ ತಯಾರಿಕೆಯಲ್ಲಿ ಬಹುಮುಖ್ಯ ಪತ್ರ ವಹಿಸಲಿದ್ದಾರೆ.

ADVERTISEMENT

‘ಗ್ರಾಮದ ದಾನಿಗಳು, ಎಸ್‌ಡಿಎಂಸಿ, ಆಸಕ್ತ ಪಾಲಕರು, ವಿವಿಧ ಸಂಘ–ಸಂಸ್ಥೆಗಳು ಅಗತ್ಯಪರಿಕರ, ಬಟ್ಟೆ, ವೆಚ್ಚ ನೀಡಲು ಮುಂದಾಗಿದ್ದಾರೆ. ಶಾಲಾ ಆರಂಭದಲ್ಲಿ ಉಳಿದ ಮಕ್ಕಳಿಗೂಮಾಸ್ಕ್‌ ವಿತರಿಸಲಾಗುತ್ತದೆ. ಕೋವಿಡ್‌–19 ನಿಯಂತ್ರಣಕ್ಕೆ ಕಾಲಮಿತಿ ಇಲ್ಲ.ಹೀಗಾಗಿ, ಪ್ರತಿ ವಿದ್ಯಾರ್ಥಿಗೆ ಎರಡು ಪುನರ್‌ ಬಳಕೆಯ ಮುಖಗವಸು ನೀಡಲು ಯೋಚಿಸಲಾಗಿದೆ.ದಿನಕ್ಕೆ ಒಂದರಂತೆ ಬಳಕೆ ಮಾಡಿ, ತೊಳೆದು ಮತ್ತೆ ಉಪಯೋಗಿಸಬಹುದು’ ಎಂದು
ರೋವರ್‌ ಸ್ಕೌಟ್‌ ಲೀಡರ್‌ ಮತ್ತು ಯುವ ಘಟಕದ ಅಧ್ಯಕ್ಷ ಮಲಾರಪಾಳ್ಯದ ಎಸ್‌.ಪ್ರದೀಪ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಟುಂಬದ ಸದಸ್ಯರು, ತರಬೇತಿ ಪಡೆದ ವಿದ್ಯಾರ್ಥಿಗಳು ಮಾಸ್ಕ್‌ ತಯಾರಿಕೆಯಲ್ಲಿನೆರವಾಗಬಹುದು. ಆಸಕ್ತ ದಾನಿಗಳ ನೆರವಿನಿಂದ ಬಟ್ಟೆ, ಹೊಲಿಗೆ ಯಂತ್ರಗಳನ್ನು ಒಟ್ಟುಮಾಡಿ ಮಾಸ್ಕ್ ತಯಾರಿ ಆರಂಭ ಆಗಿದೆ’ ಎನ್ನುತ್ತಾರೆ ಇವರು.

ಬದಲಾದ ಜೀವನ ಶೈಲಿಯಿಂದ ಮಾಸ್ಕ್‌ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವದೆಸೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮುಖಗವಸುಸಿದ್ದಪಡಿಸಲಾಗುತ್ತದೆ. ಗೈಡ್ಸ್‌ ಕ್ಯಾಪ್ಟನ್‌, ರೇಂಜರ್ಸ್–ರೋವರ್ಸ್‌ ತಂಡಗಳು ಸಹಉತ್ಸಾಹದಿಂದ ಮುಖಗವಸು ಹೊಲಿಯುತ್ತಿದ್ದಾರೆ.

ಮಾಸ್ಕ್‌ಗೆ ಕನಿಷ್ಠ ₹20 ಬೆಲೆ ಇದೆ. ಕೆಲವರು ಪ್ರತಿ ಮಾಸ್ಕ್‌ಗೆ ₹4ರಬೆಲೆಯಲ್ಲಿ ಹೊಲಿದು ಕೊಡುತ್ತಾರೆ. ಗುಣಮಟ್ಟದ ಮಾಸ್ಕ್ ತಯಾರಿಕೆಗೆ ಅಗತ್ಯವಾದನೆರವನ್ನು ಶಿಕ್ಷಕರಾದ ಸತೀಶ್, ರಾಜು, ಸಿಆರ್‌ಪಿ ಪ್ರಕಾಶ್‌, ದಾನಿ ಉಮೇಶ್ಒದಗಿಸಿದ್ದಾರೆ.

ಎಲ್ಲ ತಾಲ್ಲೂಕುಗಳಲ್ಲೂ ಮಾಸ್ಕ್‌ ತಯಾರಿ

ತಾಲ್ಲೂಕಿನಲ್ಲಿ 1,000 ಮಕ್ಕಳು ಪರೀಕ್ಷೆ ಬರೆಯಲಿದ್ದು, ಅದೇ ರೀತಿಜಿಲ್ಲೆಯ ಎಲ್ಲ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಯಾ ತಾಲ್ಲೂಕಿನಲ್ಲಿ ಮಾಸ್ಕ್‌ಹೊಲಿದು ಕೊಡುವ ವ್ಯವಸ್ಥೆ ಮಾಡಲಾಗಿದೆ.

‘ಪರೀಕ್ಷೆ ನಡೆಯುವ ದಿನದಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡದ ವತಿಯಿಂದ ಪ್ರತಿಕೇಂದ್ರಕ್ಕೆ ಐದು ಜನ ಸದಸ್ಯರ ನೆರವು ಕಲ್ಪಿಸಲಾಗುವುದು. ಇವರು ಸ್ಯಾನಿಟೈಸರ್, ಅಂತರ ಕಾಪಾಡುವುದು ಮತ್ತು ನೀರು ಮತ್ತಿತರ ಸೇವೆ ಒದಗಿಸುತ್ತಾರೆ. ಶಿಕ್ಷಣಇಲಾಖೆಯ ಕಾಯಕದಲ್ಲಿ ಕೈಜೋಡಿಸುವುದು ನಮ್ಮ ಆಶಯ’ ಎಂದು ಭಾರತ್ ಸ್ಕೌಟ್ಸ್ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ವೈ.ಆರ್. ರಂಗಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.