ADVERTISEMENT

ಚೇತರಿಕೆ ಕಂಡ ಮಾದಪ್ಪನ ಆದಾಯ; ಹುಂಡಿಯಲ್ಲಿ ₹ 2.21 ಕೋಟಿ ನಗದು

40 ಗ್ರಾಂ ಚಿನ್ನ, 1.65 ಬೆಳ್ಳಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 7:52 IST
Last Updated 13 ನವೆಂಬರ್ 2020, 7:52 IST
ಹುಂಡಿ ಹಣ ಏಣಿಕೆ ಮಾಡುತ್ತಿರುವ ದೇವಾಲಯದ ಸಿಬ್ಬಂದಿ
ಹುಂಡಿ ಹಣ ಏಣಿಕೆ ಮಾಡುತ್ತಿರುವ ದೇವಾಲಯದ ಸಿಬ್ಬಂದಿ   
""

ಹನೂರು (ಚಾಮರಾಜನಗರ): ಕೋವಿಡ್ ಕಾರಣದಿಂದ ಕುಸಿದಿದ್ದ ಇಲ್ಲಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಆದಾಯ ಈಗ ಚೇತರಿಸಿಕೊಳ್ಳುತ್ತಿದ್ದು, 54 ದಿನಗಳ ಅವಧಿಯಲ್ಲಿ ₹2.21 ಕೋಟಿ ಹುಂಡಿ ಕಾಣಿಕೆ ಸಂಗ್ರಹವಾಗಿದೆ.

ಗುರುವಾರ ದೇವಾಲಯದಲ್ಲಿ ತಡ ರಾತ್ರಿವರೆಗೆ ಹುಂಡಿ ಎಣಿಕೆ ನಡೆದಿದ್ದು, 40 ಗ್ರಾಂ ಚಿನ್ನ, 1.65 ಕೆಜಿ ಬೆಳ್ಳಿಯನ್ನೂ ಭಕ್ತರು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ಈ ಮೊದಲು, ಸೆಪ್ಟೆಂಬರ್ 18ರಂದು ಹುಂಡಿ ಎಣಿಕೆ ನಡೆದಿತ್ತು.

ಕೋವಿಡ್ ಕಾರಣದಿಂದ ನವೆಂಬರ್ 1 ರವರೆಗೂ ಬೆಟ್ಟದಲ್ಲಿ ವಾಸ್ತವ್ಯಕ್ಕೆ, ಮುಡಿ ಸೇವೆ ಹಾಗೂ ಇತರ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು.

ADVERTISEMENT

ನ.1ರ ನಂತರ ಭಕ್ತರಿಗೆ ಮುಡಿಸೇವೆ, ಚಿನ್ನದ ತೇರಿನ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಮಾಡಲು ಅನುಕೂಲ ಕಲ್ಪಿಸಲಾಗಿದೆ.

ಸಂಗ್ರಹವಾಗಿರುವ ಹುಂಡಿ ಕಾಣಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.