ಆರು ದಶಕದಿಂದ ನಮ್ಮ ನಾಡಿನಲ್ಲಿ ಭದ್ರವಾಗಿ ನೆಲೆ ನಿಂತಿರುವ ಟಿಬೆಟಿಯನ್ನರು ಮೂಲ ಬೌದ್ಧ ಸಂಸ್ಕೃತಿಯನ್ನು ಜತನದಿಂದ ಪಾಲಿಸುತ್ತ, ಆರಾಧಿಸುತ್ತಾ ನಮ್ಮ ನೆಲದ ಸಂಸ್ಕೃತಿಯೊಂದಿಗೂ ಬೆರೆತು ಹೋಗಿದ್ದಾರೆ. ಆಶ್ರಯ ಕೊಟ್ಟ ಭಾರತದ ಮೇಲೆ ಅಪಾರ ಗೌರವ, ಅಭಿಮಾನ ತೋರುವ ಟಿಬೆಟಿಯನ್ನರು ನೆಲೆನಿಂತಿರುವ ಕನ್ನಡನಾಡು ನುಡಿಯ ಮೇಲೂ ಅಷ್ಟೇ ಅಭಿಮಾನ ಹೊಂದಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಒಡೆಯರ್ ಪಾಳ್ಯದಲ್ಲಿರುವ ದೊಂದೆಲಿಂಗ್ ಟಿಬಿಟಿಯನ್ ಕ್ಯಾಂಪ್ ಸದ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.