ADVERTISEMENT

ಗುಂಡ್ಲುಪೇಟೆ: ಡ್ರೋನ್‌ ಕಣ್ಣಿಗೆ ಬಿದ್ದ ಹಸುಗಳ ಮೇಲೆ ದಾಳಿ ನಡೆಸಿದ್ದ ಹುಲಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:35 IST
Last Updated 22 ಡಿಸೆಂಬರ್ 2025, 2:35 IST
ಭೀಮನಬೀಡಿಲ್ಲಿ ಡ್ರೋನ್ ಕಣ್ಣಿಗೆ ಬಿದ್ದ ಹುಲಿ
ಭೀಮನಬೀಡಿಲ್ಲಿ ಡ್ರೋನ್ ಕಣ್ಣಿಗೆ ಬಿದ್ದ ಹುಲಿ   

ಗುಂಡ್ಲುಪೇಟೆ: ತಾಲ್ಲೂಕಿನ ಭೀಮನಬೀಡಿನಲ್ಲಿ ಎರಡು ಹಸುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಲಿ ಚಲನವಲನವನ್ನು ಥರ್ಮಲ್ ಡ್ರೋನ್ ಜೊತೆಗೆ ಈಗಲ್ ಡ್ರೋನ್ ಬಳಸಿ ಅರಣ್ಯ ಸಿಬ್ಬಂದಿಗಳು ಹುಲಿ ಸಂಚರಿಸುತ್ತಿರುವ ದೃಶ್ಯ ಸೆರೆಹಿಡಿದಿದ್ದಾರೆ.

ಎರಡು ದಿನ ಹಿಂದೆ ಸಿದ್ದಶೆಟ್ಟಿ ಎಂಬುವವರಿಗೆ ಸೇರಿದ ಹಸುಗಳು ಬಾಳೆ ತೋಟದಲ್ಲಿ ಮೇಯುತ್ತಿದ್ದ ವೇಳೆ ಹುಲಿ ದಾಳಿ ನಡೆಸಿ ಕಾಲುಗಳನ್ನು ಕಚ್ಚಿ ಗಾಯಗೊಳಿಸಿತ್ತು. ನಂತರ ರೈತರು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚಣೆ ನಡೆಸಿದ ವೇಳೆ ಪತ್ತೆಯಾಗಿದೆ. ಇದರಲ್ಲಿ ಎರಡು ಹುಲಿ ಚಲನವಲನ ಕಂಡು ಬಂದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಶೀಘ್ರದಲ್ಲೇ ಸೆರೆಹಿಡಿಯಲಾಗುವುದು ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.