
ಪ್ರಜಾವಾಣಿ ವಾರ್ತೆ
ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿಯ ರೈತ ಕದರಯ್ಯ ಅವರ ಜಮೀನಿನಲ್ಲಿ ಶನಿವಾರ ಕಾಡಾನೆ ಲಗ್ಗೆ ಇಟ್ಟು ಅರ್ಧ ಎಕರೆಯಷ್ಟು ಜೋಳದ ಫಸಲು ಸೇರಿದಂತೆ ವಿವಿಧ ಕೃಷಿ ಪರಿಕರ ನಾಶಗೊಳಿಸಿದೆ.
ಈ ಸಂಬಂಧ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಲು ಮುಂದಾಗುತ್ತಿದ್ದಂತೆ ರೈತ ಸಂಘದ ಮುಖಂಡರು ಇಲಾಖೆಯ ಮೇಲಾಧಿಕಾರಿಗಳು ಬರುವವರೆಗೂ ಮಹಜರು ಮಾಡುವುದು ಬೇಡ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.
‘ಗ್ರಾಮವು ಕಾಡಂಚಿನಲ್ಲಿ ಇರುವುದರಿಂದ ಆನೆ ದಾಳಿಯು ನಿರಂತರವಾಗಿದೆ. ಕಾಡು ಪ್ರಾಣಿಗಳ ನಿಯಂತ್ರಣಕ್ಕ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು’ ಒತಾಯಿಸಿದರು.
ಎಂ.ಟಿ ದೊಡ್ಡಿ ಗ್ರಾಮದ ಶ್ರೀನಿವಾಸ್, ಶಿವಪ್ಪ, ಮುರುಗೇಶ್, ಶರಣ್, ಕದರಯ್ಯ, ಸ್ವಾಮಿ, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.