ADVERTISEMENT

ನಿವೃತ್ತಿಯಲ್ಲೂ ಕಾರ್ಯ ಪ್ರವೃತ್ತರಾಗಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 11:00 IST
Last Updated 24 ಜನವರಿ 2011, 11:00 IST

ಚಿಕ್ಕಬಳ್ಳಾಪುರ: ನಿವೃತ್ತ ಪೊಲೀಸ್ ಅಧಿಕಾರಿಗಳು ಒಂದುಗೂಡಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ನಿವೃತ್ತಗೊಂಡ ಮನೋಭಾವನೆಯಲ್ಲಿ ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯಬಾರದು ಎಂದು ತುಮಕೂರಿನ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಎಸ್.ಐ.ಮಾಲೂರಪ್ಪ ತಿಳಿಸಿದರು.

ನಗರದಲ್ಲಿ  ಭಾನುವಾರ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿವೃತ್ತಗೊಂಡ ನಂತರವೂ ಜನಪರವಾದ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು’ ಎಂದರು.

ಜಿಲ್ಲೆಯಲ್ಲಿ ಬೇರೆ ಬೇರೆ ಕಡೆಗಳಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಗಳು ಒಂದುಗೂಡಿ ಪರಸ್ಪರ ಸಹಕಾರ ಮಾಡುವ ಕೆಲಸಗಳನ್ನು ಹಮ್ಮಿಕೊಳ್ಳಬಹುದು. ಪ್ರಕರಣಗಳಿಗೆ ಸಂಬಂಧಿಸಿದಂತೆ  ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡುವುದು, ಬಡಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ನಿವೃತ್ತರಾಗಿದ್ದೇವೆ ಎಂಬ ನಿರಾಶಭಾವ ಯಾವುದೇ ಕಾರಣಕ್ಕೂ ಮೂಡಬಾರದು ಎಂದು ಅವರು ಹೇಳಿದರು.

ಸಂಘದ ಸದಸ್ಯರಾದ ಸುಬ್ಬರಾಯಪ್ಪ, ರಾಮಕೃಷ್ಣಪ್ಪ, ಮಹಮ್ಮದ್ ದಸ್ತಗೀರ್, ಗಿಲ್ಬರ್ಟ್, ವಿ.ನಾಣಾಚಾರಿ, ಟಿ.ಲಕ್ಷ್ಮಿಕಾಂತ ಆಚಾರ, ಹನುಮಂತಪ್ಪ, ನರಸಿಂಹಾಚಾರ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.