ADVERTISEMENT

ಸರ್ಕಾರಗಳಿಂದ ರೈತರಿಗೆ ವಂಚನೆ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 6:55 IST
Last Updated 25 ಮಾರ್ಚ್ 2011, 6:55 IST
ಸರ್ಕಾರಗಳಿಂದ ರೈತರಿಗೆ ವಂಚನೆ: ಆರೋಪ
ಸರ್ಕಾರಗಳಿಂದ ರೈತರಿಗೆ ವಂಚನೆ: ಆರೋಪ   

ಗುಡಿಬಂಡೆ:  ರೈತರಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿಕೊಂಡು, ನೇಗಿಲಯೋಗಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಹಾಗೂ ಜೈಜವಾನ್ ಘೋಷಣೆಗೆ ನಾವೇ ವಾರಸುದಾರರು ಎಂದು ಹೇಳಿ ಕೊಂಡು ಕೆಂದ್ರದಲ್ಲಿ ಅಧಿಕಾರ ನಡೆಸು ತ್ತಿರುವ ಸರ್ಕಾರಗಳು ರೈತರಿಗೆ ಪೊಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಕೃಷಿಕರಿಗೆ ಮೋಸ ಮಾಡುತ್ತಿವೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

ತಾಲ್ಲೂಕು ಪ್ರಾಂತ ರೈತ ಸಂಘ ಗುರುವಾರ ಆಯೋಜಿಸಿದ್ದ ಪಂಪ್ ಸೆಟ್ ಬಳಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿರುವ ಜಲ ಸಂಪನ್ಮೂಲ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಿದರೆ ಅದಕ್ಕೆ ತಗಲುವ ವೆಚ್ಚ ಯುನಿಟ್‌ಗೆ ಕೇವಲ 25 ಪೈಸೆ ಮಾತ್ರ. ಶಾಖೋತ್ಪನ್ನ ಹಾಗೂ ಇತರೆ ಮೂಲಗಳ ವಿದ್ಯುತ್ ಉತ್ಪಾದನೆಗೆ ತಗಲುವ ಖರ್ಚು ಶೇ. 50ರಷ್ಟು ಅಧಿಕ. ಕಡಿಮೆ ಖರ್ಚಿನ ಜಲ ವಿದ್ಯುತ್ ಯೋಜನೆಗಳಿಗೆ ಒಲವು ತೋರದ ಸರ್ಕಾರಗಳು ಬೇರೆಡೆ ಯಿಂದ ವಿದ್ಯುತ್ ಖರೀದಿಗೆ ಲಾಬಿ ನಡೆಸುವುದರ ಮೂಲಕ ಜನರ ಮೇಲೆ ಹೊರೆ ಹಾಕುತ್ತಿವೆ. ರೈತರ ಪಾಲಿಗೆ ಇತ್ತ ವಿದ್ಯುತ್ ಇಲ್ಲ, ಅತ್ತ ಬೆಳೆಯೂ ಇಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದಲ್ಲಿ ಆಹಾರ ಕೊರತೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಗಂಗಿರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ತಿರು ಮಣಿ ಎ.ಮುನಿರೆಡ್ಡಿ, ರೈತ ಮುಖಂಡ ರಾದ ಯಲ್ಲೋಡು ಅಶ್ವತ್ಥ ರೆಡ್ಡಿ, ಭೈರಪ್ಪ, ಶ್ರೀನಿವಾಸ್, ಎ.ವಿ.ಟಿ. ನಾರಾಯಣಸ್ವಾಮಿ, ಶಿವಪ್ಪ, ಈಶ್ವರಪ್ಪ, ಲಕ್ಷ್ಮೀನಾರಾಯಣ ಭಾಗ ವಹಿಸಿದ್ದರು.

ಹೋರಾಟ ಸಮಿತಿ: ರೈತರ ವಿದ್ಯುತ್ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲು 22 ಮಂದಿ ಸದಸ್ಯರ ಸಮಿತಿಯನ್ನು ರಚಿಸಲು ಸಭೆ ಅನು ಮೋದನೆ ನೀಡಿತು. ಅಧ್ಯಕ್ಷರಾಗಿ ತಾ.ಪಂ. ಸದಸ್ಯ ಎ.ಮುನಿರೆಡ್ಡಿ, ಉಪಾಧ್ಯಕ್ಷ- ಗೆಗ್ಗಿರರಾಳ್ಳಹಳ್ಳಿ ನರ ಸಿಂಹರೆಡ್ಡಿ, ಕಾರ್ಯದರ್ಶಿ- ಯಲ್ಲೋಡು ಅಶ್ವತ್ಥರೆಡ್ಡಿ,  ಸಹ ಕಾರ್ಯದರ್ಶಿ- ಬೆಣ್ಣೆಪರ್ತಿ ಅಶ್ವ ತ್ಥಪ್ಪ, ಖಜಾಂಚಿ-ಸೋಮೇನ ಹಳ್ಳಿ ಮಲ್ಲಿಕಾರ್ಜುನ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.