ADVERTISEMENT

ಸತ್ಯಸಾಯಿ ಸಂಸ್ಥೆಯಿಂದ ₹50 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 13:40 IST
Last Updated 23 ಏಪ್ರಿಲ್ 2020, 13:40 IST
ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆ ಪದಾಧಿಕಾರಿಗಳು ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೇಣಿಗೆ ಚೆಕ್‌ ಹಸ್ತಾಂತರಿಸಿದರು.
ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆ ಪದಾಧಿಕಾರಿಗಳು ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೇಣಿಗೆ ಚೆಕ್‌ ಹಸ್ತಾಂತರಿಸಿದರು.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆ ಮತ್ತು ಅಂಗ ಸಂಸ್ಥೆಗಳ ಪರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಇತ್ತೀಚೆಗೆ ₹50 ಲಕ್ಷ ದೇಣಿಗೆ ನೀಡಲಾಯಿತು.

ಸತ್ಯಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹ ಮೂರ್ತಿ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೇಣಿಗೆ ಚೆಕ್‌ ಹಸ್ತಾಂತರಿಸಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್, ಸಂಸ್ಥೆಯ ಮುಖ್ಯ ಸಮನ್ವಯಾಧಿಕಾರಿ ಗೋವಿಂದ ರೆಡ್ಡಿ, ಆಡಳಿತಾಧಿಕಾರಿ ಶಿವಸುಬ್ರಮಣ್ಯ, ಸತೀಶ್ ಬಾಬು ಹಾಜರಿದ್ದರು.

ADVERTISEMENT

ದಿನಸಿ, ಮಾತ್ರೆ ವಿತರಣೆ: ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಯು ಸುಮಾರು ₹30 ಲಕ್ಷ ಮೌಲ್ಯದ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ಹಲವು ರಾಜ್ಯಗಳ ಅರ್ಹ ಜನರಿಗೆ ನೀಡಿದೆ. ಸತ್ಯಸಾಯಿ ಲೋಕ ಸೇವಾ ಆರೋಗ್ಯ ಕೇಂದ್ರವು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಸುಮಾರು ₹30 ಲಕ್ಷ ಮೌಲ್ಯದಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆ ಮಾತ್ರೆಗಳನ್ನು 4,500 ಜನರಿಗೆ ಅವರವರ ಮನೆಗಳಿಗೇ ತಲುಪಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.