ADVERTISEMENT

ಚಿಕ್ಕಬಳ್ಳಾಪುರ: ನಮ್ಮ ನಗರ ನಮ್ಮ ಧ್ವನಿಗೆ ಜನಾಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 14:23 IST
Last Updated 6 ಜನವರಿ 2020, 14:23 IST
ಯಲುವಹಳ್ಳಿ ಸೊಣ್ಣೇಗೌಡ
ಯಲುವಹಳ್ಳಿ ಸೊಣ್ಣೇಗೌಡ   

ಚಿಕ್ಕಬಳ್ಳಾಪುರ: ನಗರಸಭೆ ‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನ ಹಾಗೂ ದಕ್ಷಿಣ ಭಾರತದಲ್ಲಿ 4ನೇ ಸ್ಥಾನ ಪಡೆದಿದೆ ಎಂಬ ಸುದ್ದಿ ಕೇಳಿ ಖುಷಿಯ ಬದಲು ಆಶ್ಚರ್ಯವಾಯಿತು. ನಗರದಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಕೊಂಚವೂ ಬದಲಾಗಿಲ್ಲ. ನಗರವನ್ನು ಒಂದು ಸುತ್ತು ಹಾಕಿದರೆ ಇಂದಿಗೂ ಗಲ್ಲಿಗಲ್ಲಿಗಳಲ್ಲಿ ಕಸ ರಾಶಿಗಳು ಗೋಚರಿಸುತ್ತವೆ.

ಪರಿಸ್ಥಿತಿ ಹೀಗಿರುವಾಗ ನಮ್ಮ ನಗರಸಭೆ ಇಂತಹ ಸ್ಥಾನಮಾನ ಪಡೆಯಲು ಒಂದೋ ಲಾಬಿ ನಡೆಸಿರಬೇಕು ಅಥವಾ ಅಧಿಕಾರಿಗಳು ಅಂತರಜಾಲದಲ್ಲಿ ಕಳುಸಿರುವ ಬಣ್ಣಬಣ್ಣದ ಫೋಟೊಗಳು ಸಮೀಕ್ಷೆ ನಡೆಸುವವರನ್ನು ಮರಳು ಮಾಡಿರಬೇಕು. ಶಿಸ್ತು ಮತ್ತು ನಿಯಮಗಳೆಲ್ಲಾ ಹಿಂದಿನ ಜಿಲ್ಲಾಧಿಕಾರಿ ಅವರ ಜತೆಯಲ್ಲಿಯೇ ಹೊರಟು ಹೋಗಿವೆ. ನಿಜರೂಪ ದರ್ಶನ ಮಾಡಿಸಿದ ಪ್ರಜಾವಾಣಿಗೆ ಧನ್ಯವಾದಗಳು.

*ಯಲುವಹಳ್ಳಿ ಸೊಣ್ಣೇಗೌಡ, ವಾಪಸಂದ್ರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.