ADVERTISEMENT

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ: 18 ರೈತರಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 7:19 IST
Last Updated 30 ಅಕ್ಟೋಬರ್ 2025, 7:19 IST
   

ಚಿಂತಾಮಣಿ: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ 2025ಅನ್ನು ನವೆಂಬರ್ 13 ರಿಂದ 16 ರವರೆಗೆ ಆಯೋಜಿಸಿದ್ದು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ ಬುಧವಾರ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದರು.

ಜಿಲ್ಲೆಯ 18 ಸಾಧಕ ರೈತರಿಗೆ ಕೃಷಿಮೇಳ 2025ರಲ್ಲಿ ಪುರಸ್ಕಾರ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಚಿಂತಾಮಣಿ ತಾಲ್ಲೂಕಿನ ಬನಹಳ್ಳಿ ಗ್ರಾಮದ ಬಿ.ನಂಜುಂಡಗೌಡ ಹಾಗೂ ರೈತ ಮಹಿಳಾ ಪ್ರಶಸ್ತಿಗೆ ಬೈರಪ್ಪನಹಳ್ಳಿ ಗ್ರಾಮದ ಗೌತಮಿ ಆಯ್ಕೆಯಾಗಿದ್ದಾರೆ.

ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ಗೌರಿಬಿದನೂರು ತಾಲ್ಲೂಕು: ಎಂ.ಜಾಲಹಳ್ಳಿ ಗ್ರಾಮದ ಬಿ.ಸಿ.ಕಿರಣ್‌ಕುಮಾರ್, ಗೆದರೆ ಗ್ರಾಮದ ಗಾಯತ್ರಿ. ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮದ ಬಿ.ಆರ್.ವಿಜಯ್ ಕುಮಾರ್, ಓಬಗಾರನಹಳ್ಳಿ ಗ್ರಾಮದ ಪಿ. ದಿವ್ಯಾ. ಬಾಗೇಪಲ್ಲಿ: ಮುಮ್ಮಡಿವಾರಿಪಲ್ಲಿ ಗ್ರಾಮದ ಎಸ್. ಹರಿನಾಥ್ ರೆಡ್ಡಿ, ಗುಟ್ಟಮೀದಪಲ್ಲಿ ಗ್ರಾಮದ ಎಂ. ಮಾಲತಿ. ಶಿಡ್ಲಘಟ್ಟ: ಮಳಮಾಚನಹಳ್ಳಿ ಗ್ರಾಮದ ಎಂ.ಜೆ.ಪ್ರವೀಣ್ ಕುಮಾರ್, ಕಾಳಿನಾಯಕನಹಳ್ಳಿ ಗ್ರಾಮದ ಜೆ. ಭವಾನಿ. ಚಿಂತಾಮಣಿ: ನಿಮ್ಮಕಾಯಲಹಳ್ಳಿ ಗ್ರಾಮದ ಎನ್. ಶ್ರೀನಾಥ, ಕೆಂದನಹಳ್ಳಿ ಗ್ರಾಮದ ಕೆ.ಎಲ್. ಮನುಶ್ರೀ ಆಯ್ಕೆಯಾಗಿದ್ದಾರೆ.

ADVERTISEMENT

ಚಿಕ್ಕಬಳ್ಳಾಪುರ: ನಕ್ಕನಹಳ್ಳಿ ಗ್ರಾಮದ ಎನ್.ನರೇಂದ್ರ, ಹೊಸಹಳ್ಳಿ ಗ್ರಾಮದ ಟಿ.ಎ. ವೇದಾವತಿ. ಮಂಚೇನಹಳ್ಳಿ: ಪುರ ಗ್ರಾಮದ ಪಿ.ಎ.ಚಂದ್ರಶೇಖರ್, ಕಾಮಗಾನಹಳ್ಳಿ ಗ್ರಾಮದ ನಾಗಮಣಿ. ಚೇಳೂರು: ಚೌಡಂಪಲ್ಲಿ ಗ್ರಾಮದ ಸಿ.ವಿಶ್ವನಾಥ, ವೆಂಕಟಾಪುರ ಗ್ರಾಮದ ಎಂ.ವಿ.ಅನಿತ ಅನಿತ ಆಯ್ಕೆಯಾಗಿದ್ದಾರೆ.

ವಿಜ್ಞಾನಿ ವಿಶ್ವನಾಥ್, ಕೆ.ಸಂಧ್ಯಾ, ಆರ್. ಪ್ರವೀಣಕುಮಾರ್, ಅಮೋಘವರ್ಷ ಚಿತ್ತರಗಿ, ತನ್ವೀರ್ ಅಹ್ಮದ್ ಹಾಗೂ ಡಾ. ಸೌಮ್ಯ ಹೀರೇಗೌಡರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.