
ಪ್ರಜಾವಾಣಿ ವಾರ್ತೆ
ನಟ ಬಾಲಕೃಷ್ಣ, ಶಿವರಾಜ್ ಕುಮಾರ್
ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರದ ಬಳಿ ಶುಕ್ರವಾರ ರಾತ್ರಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ-2’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಬಾಲಕೃಷ್ಣ ಅವರ ಪರವಾಗಿ ಜಯಘೋಷಗಳನ್ನು ಮೊಳಗಿಸಿದರು. ಬಾಲಕೃಷ್ಣ ವೇದಿಕೆಗೆ ಬರುತ್ತಿದ್ದಂತೆ ಶಿಳ್ಳೆ, ಕರತಾಡನ, ಚೀರಾಟ ಕಿವಿಗಡುಚಿಕ್ಕಿದವು.
ಟ್ರೇಲರ್ ಬಿಡುಗಡೆ ಮಾಡಿದ ನಟ ಶಿವರಾಜ್ ಕುಮಾರ್, ‘ಇವತ್ತು ಬ್ರದರ್ ಸಿನಿಮಾ ಟ್ರೇಲರ್ ಲಾಂಚ್‌ಗೆ ಬಂದಿದ್ದೇನೆ. ನಾವು ಒಂದೇ ಕುಟುಂಬ. ಇವರ ತಂದೆ ನಮ್ಮ ದೊಡ್ಡಪ್ಪ. ಬಾಲಕೃಷ್ಣ ಅವರ ಕಾರ್ಯಕ್ರಮಕ್ಕೆ ಬರುವುದು ನಮಗೆ ಖುಷಿ ಆಗುತ್ತದೆ’ ಎಂದರು.
ಬಾಲಕೃಷ್ಣ, ‘ಕನ್ನಡ ಜನತೆಗೆ ನಮಸ್ಕಾರ’ ಎಂದು ಮಾತು ಆರಂಭಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.