ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಮದನಪಲ್ಲಿ ತಾಲ್ಲೂಕಿನ ಚನ್ನಮಾರಿಮಿಟ್ಟ ಗ್ರಾಮದ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಿ.ಟಿ ವಾಹನ ನಜ್ಜುಗುಜ್ಜಾಗಿರುವುದು
ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಆಂಧ್ರಪ್ರದೇಶದ ಮದನಪಲ್ಲಿ ತಾಲ್ಲೂಕಿನ ಚನ್ನಮಾರಿಮಿಟ್ಟಿಯಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಗೇಪಲ್ಲಿಯ ನಾಲ್ವರು ಮೃತಪಟ್ಟಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ತಿರುಪತಿಯಿಂದ ಬಾಗೇಪಲ್ಲಿಗೆ ವಾಪಸ್ ಬರುತ್ತಿದ್ದ ಟೆಂಪೊಕ್ಕೆ ಲಾರಿ ಡಿಕ್ಕಿ ಹೊಡೆಯಿತು. ಬಾಗೇಪಲ್ಲಿಯ ಮೇಘರ್ಷ (17), ಹೊಸಹುಡ್ಯ ಗ್ರಾಮದ ಚರಣ್ (17), ಶ್ರಾವಣಿ (28) ಹಾಗೂ ಕುಂಬಾರಪೇಟೆಯ ಟಿ.ಟಿ ಚಾಲಕ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.