ADVERTISEMENT

ಒಣಗುತ್ತಿದೆ ಕರಬೂಜ ಫಸಲು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:41 IST
Last Updated 30 ಮಾರ್ಚ್ 2020, 16:41 IST
ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ಹೊಲವೊಂದರಲ್ಲಿ ಬೆಳೆದಿರುವ ಕರಬೂಜ
ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ಹೊಲವೊಂದರಲ್ಲಿ ಬೆಳೆದಿರುವ ಕರಬೂಜ   

ಬಾಗೇಪಲ್ಲಿ: ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ಸಿಗುತ್ತಿಲ್ಲ. ತಾಲ್ಲೂಕಿನ ಜಮೀನುಗಳಲ್ಲಿ ಕಟಾವಿಗೆ ಬಂದ ಕರಬೂಜ ಬೆಳೆ ಜಮೀನಿನಲ್ಲಿ ಒಣಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ.

ಕರಬೂಜಗಳು ಹಣ್ಣಾಗಿ ಜಮೀನಿನಲ್ಲಿಯೇ ಒಣಗುತ್ತಿವೆ. ಕೆಲವು ಗ್ರಾಮಗಳಲ್ಲಿ ಜಮೀನುಗಳ ಸುತ್ತಮುತ್ತಲಿನವರೇ ಹಣ್ಣುಗಳನ್ನು ಕಟಾವು ಮಾಡಿಕೊಂಡು ಒಯ್ಯುತ್ತಿದ್ದಾರೆ.

ಈ ಬಾರಿ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇತ್ತು. ಸಾಲವೆಲ್ಲಾ ತೀರಿಸಬಹುದು ಎಂದುಕೊಂಡಿದ್ದೆ. ಆದರೆ, ಕೊರೊನಾದಿಂದ ತುಂಬಾ ನಷ್ಟವಾಗಿದೆ. ಸರ್ಕಾರ ಬೆಳೆಗೆ ಪರಿಹಾರ ಘೋಷಿಸಬೇಕು ಎಂದು ಮಾಡಪಲ್ಲಿ ಗ್ರಾಮದ ರೈತ ಗೆಂಗಿರೆಡ್ಡಿ ತಿಳಿಸಿದರು.

ADVERTISEMENT

ಬೇಸಿಗೆಯ ಸಂದರ್ಭಕ್ಕೆ ಕಟಾವು ಬರುವಂತೆ, ಸಾಲ ಮಾಡಿ ಕರಬೂಜ ಬೆಳೆ ಬೆಳೆದೆವು. ಒಂದೂವರೆ ಲಕ್ಷದಷ್ಟು ಬೆಳೆ ನಷ್ಟವಾಗಿದೆ. ಸರ್ಕಾರ ರೈತರ ಕುಟುಂಬಗಳಿಗೆ ನೆರವಾಗಬೇಕು ಎಂದು ರೈತ ಗೋವರ್ಧನರೆಡ್ಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.