
ಗುಡಿಬಂಡೆಯ ಅಂಬೇಡ್ಕರ ವೃತ್ತದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಹಾಗೂ ಸ್ಥಬ್ದ ಚಿತ್ರ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು
ಗುಡಿಬಂಡೆ: ‘ಪ್ರತಿಯೊಬ್ಬರ ಕಷ್ಟ, ದುಃಖಗಳನ್ನು ಕಣ್ಣಾರೆ ಕಂಡ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಯೊಬ್ಬರಿಗೂ ನ್ಯಾಯ ಹಾಗೂ ಸಮಾನ ಗೌರವ ಸಿಗಲಿ ಎಂಬ ಕಾರಣದಿಂದ ಸಂವಿಧಾನ ರಚಿಸಿದ್ದಾರೆ. ಅಂಬೇಡ್ಕರ್ ಬರಿ ವ್ಯಕ್ತಿಯಲ್ಲ ಅವರು ಈ ದೇಶದ ಶಕ್ತಿ’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಹಾಗೂ ಸ್ಥಬ್ದ ಚಿತ್ರ ಮೆರವಣಿಗೆಯ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ತಮಟೆ ಕಲಾವಿದರು, ವಿವಿಧ ಕಲಾ ತಂಡಗಳು, ವಾದ್ಯಗಳೊಂದಿಗೆ ಅಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಮುಖಂಡರು ಮೆರವಣಿಗೆ ನಡೆಸಿದರು.
ತಹಶೀಲ್ದಾರ್ ಭಾರತದ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಕಾರ್ಯಕ್ರಮದ ಕುರಿತು ಶಿಕ್ಷಕಿ ವಿಜಯಲಕ್ಷ್ಮಿ ಸಂವಿಧಾನದ ಕುರಿತು ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದರೆಡ್ಡಿ, ನೋಡಲ್ ಅಧಿಕಾರಿ ಇಡ್ರಹಳ್ಳಿ ಪಾಂಡುರಂಗ, ಇಒ ಹೇಮಾವತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ನಯಜ್ ಬೇಗ್, ಸಬಾ ಶಿರಿನ್, ಮುನೇಗೌಡ, ನಗೀನ್ ತಾಜ್, ವಿಕಾಸ, ಲಕ್ಷ್ಮಿಪತಿ ರೆಡ್ಡಿ, ಸುಬ್ಬರಾಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.