ADVERTISEMENT

ಬಾಗೇಪಲ್ಲಿ: ಜನಮನ ಸೆಳೆದ ಸಿರಿಧಾನ್ಯ ಮೇಳ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 14:10 IST
Last Updated 10 ಫೆಬ್ರುವರಿ 2025, 14:10 IST
ಸಿರಿಧಾನ್ಯಗಳ ಪ್ರದರ್ಶನದಲ್ಲಿ ಲಂಬಾಣಿ ಮಹಿಳೆಯರು ರಾಗಿ ಬೀಸುತ್ತಿರುವುದು
ಸಿರಿಧಾನ್ಯಗಳ ಪ್ರದರ್ಶನದಲ್ಲಿ ಲಂಬಾಣಿ ಮಹಿಳೆಯರು ರಾಗಿ ಬೀಸುತ್ತಿರುವುದು   

ಬಾಗೇಪಲ್ಲಿ: ಪಟ್ಟಣದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ’ ಜನ ಮನ ಸೆಳೆಯಿತು.

ಸಜ್ಜೆ, ನವಣೆ, ಸಾಮೆ ಸೇರಿದಂತೆ ವಿವಿಧ ತಳಿಯ ಧಾನ್ಯಗಳು, ರಾಗಿ, ಭತ್ತ, ನೆಲಗಡಲೆ, ಅವರೆ ಸೇರಿದಂತೆ ವಿವಿಧ ಧಾನ್ಯಗಳನ್ನು ಪ್ರದರ್ಶಿಸಲಾಗಿತ್ತು. ಕೃಷಿ ಯಂತ್ರಗಳಾದ ನೇಗಿಲು, ಕೊಡಲಿ, ಕುಡುಗೋಲು, ತೂಕದ ಕಲ್ಲು, ಮಡಿಕೆಯಲ್ಲಿ ಮೊಸರು ಸಂಗ್ರಹಿಸುವ ದೊತ್ತಿ, ಎತ್ತಿನಬಂಡಿ, ಕೃಷಿ ಉಪಕರಣಗಳು, ಜಾನುವಾರುಗಳ ಮೇವು, ರಸಗೊಬ್ಬರ, ಭಿತ್ತನೆ ಬೀಜಗಳನ್ನು ಪ್ರದರ್ಶನ ಮಾಡಲಾಗಿತ್ತು.

ತೋಟಗಾರಿಕೆ ಇಲಾಖೆಯಿಂದ ಗುಲಾಬಿ, ಚೆಂಡು, ಮಲ್ಲಿಗೆ ಸೇರಿದಂತೆ ವಿವಿಧ ಬಣ್ಣದ ಹೂ, ಗಿಡ, ಗಡ್ಡೆ, ಗೆಣಸು, ಔಷಧಿ, ದೇಶಿ, ವಿದೇಶಿ ಫಲ ಹಾಗೂ ಪುಷ್ಪಗಳನ್ನು ಪ್ರದರ್ಶಿಸಲಾಗಿತ್ತು.  ರ್ಶನ ಮಾಡಲಾಯಿತು. ಆದಿಯೋಗಿಯ ಪುತ್ಥಳಿ, ಬಸವಣ್ಣ, ತಂಬೂರಿ ಹೀಗೆ ಹಲವು ಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯಿತು.

ADVERTISEMENT
ಬೃಹತ್ ಗಾತ್ರದ ಈರುಳ್ಳಿ

ಮೀನುಗಾರಿಕೆ ಇಲಾಖೆಯಿಂದ ವಿವಿಧ ತಳಿಯ ಮೀನುಗಳು ಹಾಗೂ ಪಶು ಸಂಗೋಪನೆಯಿಂದ ವಿವಿಧ ತಳಿಯ ಕುರಿಗಳ ಪ್ರದರ್ಶನ ಮಾಡಲಾಯಿತು.

ರೈತರು, ಸಾರ್ವಜನಿಕರು, ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಸಿರಿಧಾನ್ಯ ಹಾಗೂ ಫಲಪುಪ್ಪ ಪ್ರದರ್ಶನವನ್ನು ವೀಕ್ಷಿಸಿದರು. ಲಂಬಾಣಿ ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಕಲಾವಿದ ಮಹೇಶ್ ಅವರ ಕನ್ನಡ ಹಾಡುಗಳ ರಸಮಂಜರಿ ಜನಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.